ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಲೆಯ ಪ್ರಾರಂಭೋತ್ಸವ..!
ತೀರ್ಥಹಳ್ಳಿ : ಶಾಲೆಯ ಮೊದಲ ದಿನ ಅತ್ಯಂತ ಸಂಭ್ರಮದಿಂದ ಪ್ರಾರಂಭವಾಗಿದೆ. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ನೀಡಿದ್ದೇವೆ. ಶೈಕ್ಷಣಿವಾಗಿ ನಮ್ಮ ತಾಲೂಕಿನಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಇದು ಈ ಬಾರಿಯೂ ಸಹ ಮುಂದುವರೆಯಬೇಕಿದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿಗಳಾದ ಗಣೇಶ್ ತಿಳಿಸಿದರು.
ಮೇ 30 ರ ಶುಕ್ರವಾರ ಸೀಬಿನಕೆರೆಯ ಸರ್ಕಾರಿ ಶಾಲೆಯಲ್ಲಿ ಈ ವರ್ಷದ ಶೈಕ್ಷಣಿಕ ವರ್ಷ ಆರಂಭದ ದಿನ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು.
ಸರ್ಕಾರಿ ಶಾಲೆ ಅಷ್ಟೇ ಅಲ್ಲದೆ ಆಂಗ್ಲ ಮಾಧ್ಯಮ ಶಾಲೆಯಾಗಿರುವ ಸೀಬಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಗ್ಗೆ ಈಗಾಗಲೇ ಎಲ್ಲರೂ ಮಾತನಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ಸಹ ಕಾಳಜಿ ವಹಿಸಬೇಕು. ಈಗಾಗಲೇ ಕೊರೋನ ಎಂಬುದು ಮತ್ತೆ ಕಾಣಿಸಿಕೊಂಡಿದೆ. ಆ ಕಾರಣ ದಿಂದ ಎಚ್ಚರಿಕೆ ವಹಿಸಿ ಎಂದರು.
ಪ್ರಾಸ್ತಾವಿಕ ನುಡಿಯನ್ನು ಮಹಾಬಲೇಶ್ವರ ಹೆಗಡೆ ಮಾತಾನಾಡಿ ನಮಗಿಲ್ಲದ ಭಾಗ್ಯ ನಮ್ಮ ಮಕ್ಕಳಿಗೆ ಸಿಗುತ್ತಿದೆ. ನಾವು ಶಾಲೆಗೆ ಹೋಗುವಾಗ ಪುಷ್ಪ ನೀಡಿ ಬರಮಾಡಿಕೊಳ್ಳುವುದನ್ನು ನಾವು ನೋಡಿಲ್ಲ. ಈಗ ಅದೆಲ್ಲ ಆಗುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಎಂಬುವುದು ಬಹಳ ಸಂತೋಷವಾಗುತ್ತಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ತೀರ್ಥಹಳ್ಳಿಯೇ ಮೊದಲ ಸ್ಥಾನ ಪಡೆದಿದೆ. ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬರಿ ಊಟ ಹಾಕಿದರೆ ಮಾತ್ರ ಸರ್ಕಾರಿ ಶಾಲೆ ಎಂಬುವುದಲ್ಲದೆ ಶಿಕ್ಷಣದಲ್ಲೂ ಮೊದಲ ಸ್ಥಾನ ಬರಬೇಕು ಎಂಬುದನ್ನು ನಾವು ತೋರಿಸಿದ್ದೇವೆ ಎಂದು ಹೇಳಿದರು.
ಗೀತಾ ರಮೇಶ್ ಮಾತನಾಡಿ ತೀರ್ಥಹಳ್ಳಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ತೀರ್ಥಹಳ್ಳಿಯನ್ನು ರಾಜ್ಯದ ಜನರು ಶಿಕ್ಷಣದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ
ಒಳ್ಳೆಯ ಫಲಿತಾಂಶ ಪಡೆಯುವ ಮೂಲಕ ತೀರ್ಥಹಳ್ಳಿಗೆ ಕೀರ್ತಿ ತಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಹಾಗೂ ಮೊಟ್ಟೆ ನೀಡಲಾಗುತ್ತಿದೆ. ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಮಾದರಿ ಶಾಲೆಯಾಗಿ ಈ ಶಾಲೆ ಗುರುತಿಸಿಕೊಳ್ಳಲಿ ಎಂದು ಹಾರೈಸಿದರು.
ರತ್ನಾಕರ್ ಶೆಟ್ಟಿ ಮಾತನಾಡಿ ಈ ಶಾಲೆಯಲ್ಲಯೇ ನಾನು ವಿದ್ಯಾಭ್ಯಾಸ ಮಾಡಿದ್ದು, ಅದರಿಂದ ಈ ಶಾಲೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಈ ಶಾಲೆ ಮುಚ್ಚುವ ಹಂತಕ್ಕೆ ಹೋಗಿತ್ತು, ಆದರೆ ನಾವು ಓದಿರುವ ಶಾಲೆ ಎಂಬ ಕಾರಣದಿಂದ ಹಳೆಯ ವಿದ್ಯಾರ್ಥಿಗಳು ಸೇರಿ ಪುನರಾರಂಭ ಮಾಡಿದ್ದೇವೆ. ಈ ಶಾಲೆ ಇನ್ನಷ್ಟು ಹೆಸರು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಪ. ಪಂ ಸದಸ್ಯರಾದ ರತ್ನಾಕರ್ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್, ರಾಮದಾಸ್ ಪ್ರಭು,
ಸೇರಿ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
Tags:
ತೀರ್ಥಹಳ್ಳಿ ಸುದ್ದಿ