ಲಾರಿ ಕಾರು ನಡುವೆ ಭೀಕರ ಅಪಘಾತ, ಸಾಗರದ ಐವರು ಸ್ಥಳದಲ್ಲೇ ಸಾವು sagara

 ಲಾರಿ ಕಾರು ನಡುವೆ ಭೀಕರ ಅಪಘಾತ, ಸಾಗರದ ಐವರು ಸ್ಥಳದಲ್ಲೇ ಸಾವು






ಹುಬ್ಬಳ್ಳಿ: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಸಾಗರ ತಾಲೂಕಿನ ಐವರು  ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಜಿಲ್ಲೆ ಕುಸುಗಲ್‌ ಸಮೀಪದ ಇಂಗಳಹಳ್ಳಿ ಕ್ರಾಸ್‌ ಬಳಿ ಅಪಘಾತ ಸಂಭವಿಸಿದೆ.

ಸಾಗರ ತಾಲೂಕಿನ ಶ್ವೇತಾ (29), ಅಂಜಲಿ (26), ಸಂದೀಪ್‌ (26), ವಿಠ್ಠಲ (55), ಶಶಿಕಲಾ (40) ಮೃತಪಟ್ಟ ದುರ್ದೈವಿಗಳು. ಹೊಟೇಲ್‌ ವ್ಯಾಪಾರಕ್ಕೆಂದು ಕುಟುಂಬದವರು ಬಾಗಲಕೋಟೆಗೆ ತೆರಳುತ್ತಿದ್ದು ಎನ್ನಲಾಗಿದೆ. ಈ ವೇಳೆ ಹುಬ್ಬಳ್ಳಿ – ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.








Previous Post Next Post