ಆರ್‌.ಎಂ. ಎಂ ಜಾಮೀನು ಅರ್ಜಿ ತಿರಸ್ಕೃತ.! RMM

ಆರ್‌.ಎಂ. ಎಂ ಜಾಮೀನು ಅರ್ಜಿ ತಿರಸ್ಕೃತ.!

ತೀರ್ಥಹಳ್ಳಿ : ಡಿಸಿಸಿ ಬ್ಯಾಂಕ್ ಹಗರಣ ಸಂಬಂಧಪಟ್ಟಂತೆ ಈಗಾಗಲೇ ಇ. ಡಿ ಕಷ್ಟಡಿಯಲ್ಲಿರುವ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ್ ಗೌಡರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಕೊಂಡಿದೆ.

ಮೇ 20 ರಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಇತ್ತು. ಆದರೆ ಆರ್ ಎಂ ಎಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕೃತಗೊಳಿಸಲಾಗಿದೆ. ಮುಂದಿನ 10 ದಿನಗಳ ಕಾಲ ನ್ಯಾಯಾಲಯಕ್ಕೆ ರಜೆ ಇರುವುದರಿಂದ ಮಂಜುನಾಥಗೌಡರು ಇನ್ನಷ್ಟು ಕಾಲ ಇ.ಡಿ 
ಕಸ್ಟಡಿಯಲ್ಲಿ ಇರುವುದು ಅನಿವಾರ್ಯವಾಗಿದೆ.

ಒಟ್ಟಿನಲ್ಲಿ ಇ. ಡಿ ಕೈಲಿ ಸಿಕ್ಕಿರುವ ಮಂಜುನಾಥ್ ಗೌಡರಿಗೆ ಹೊರ ಬರಲು ಆಗದಂತೆ ಆಗಿದ್ದು ಈಗಾಗಲೇ ಸಲ್ಲಿಸಿದ್ದ ಒಟ್ಟು ಮೂರು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕೃತ ಮಾಡಿದೆ.

Previous Post Next Post