ಸುಹಾಸ್ ಶೆಟ್ಟಿ ಹ*ತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ - ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಗ ಕೆಂಡಾಮಂಡಲ Araga jnanendra

 ಸುಹಾಸ್ ಶೆಟ್ಟಿ ಹ*ತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ - ಕಾಂಗ್ರೆಸ್ ಸರ್ಕಾರದ ವಿರುದ್ಧ ಆರಗ ಕೆಂಡಾಮಂಡಲ








ತೀರ್ಥಹಳ್ಳಿ : ಸುಹಾಸ್ ಶೆಟ್ಟಿ ಹತ್ಯೆ ನಡೆದಿರುವುದು ಬಹಳ ನೋವಿನ ಸಂಗತಿಯಾಗಿದೆ. ಗುರುವಾರ ರಾತ್ರಿ 8 ಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕಾರಿನಲ್ಲಿ ಏನಾದರು ಇಟ್ಟುಕೊಂಡಿದ್ದಾರೆ ಎಂಬ ಸಂಶಯದಿಂದ ಸುಹಾಸ್ ಶೆಟ್ಟಿಯ ಕಾರನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆತ್ಮ ರಕ್ಷಣೆಗಾಗಿ ಏನಾದರು ಇಟ್ಟು ಕೊಂಡಿದ್ದರೆ ಅವರ ಜೀವ ಉಳಿಯುತ್ತಿತ್ತು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶುಕ್ರವಾರ ಸಂಜೆ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ರೌಡಿ ಶೀಟರ್ ಅಂತ ಎಸ್ ಪಿ ಹೇಳುತ್ತಾರೆ. ಈಗಿನ ಕಾಂಗ್ರೆಸ್ ಸರ್ಕಾರ ಯಾರ ಮೇಲೆ ಬೇಕಾದರೂ ರೌಡಿ ಶೀಟರ್ ಪಟ್ಟ ಕಟ್ಟುತ್ತದೆ. 2017 ರಲ್ಲಿ ಸಿದ್ದರಾಮಯ್ಯನವರ ಆಡಳಿತದಲ್ಲಿ 28,000 ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು. ನಮಗೆ ಮಂಗಳೂರು ಪೋಲೀಸರ ಮೇಲೆ ಅನುಮಾನ ಎಂದು ತಿಳಿಸಿದರು.

ಇದೊಂದು ಹೇಡಿಗಳು ಮಾಡಿರುವ ಕೃತ್ಯ ಆಗಿದೆ. ಮುಸಲ್ಮಾನ ಹೆಣ್ಣು ಮಕ್ಕಳು ಈ ಕೃತ್ಯದಲ್ಲಿ ಭಾಗಿಯಾಗಿ ಅಪರಾಧಿಗಳು ಎಸ್ಕೇಪ್ ಆಗಲು ಸಹಾಯ ಮಾಡಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಮಾನಸಿಕ ರೋಗಿ ಎನ್ನುತ್ತಾರೆ, ಅದೇ ಹಿಂದೂವಿಗೆ ರೌಡಿ ಶೀಟರ್ ಎನ್ನುತ್ತಾರೆ. ಇದು ಕಾಂಗ್ರೆಸ್ ಸರ್ಕಾರ ದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಎಂದರು.

ಇಡೀ ದೇಶದಲ್ಲಿ ಹಿಂದೂ ವಿರೋಧಿ ಅಲೆ ಇದೆ. ಪಹಲ್ಗಾಮ್ ನಿಂದ ಮಂಗಳೂರುವರೆಗೆ ಹಿಂದೂಗಳು ಒಗ್ಗಟ್ಟಾಗಬೇಕಿದೆ. ವೋಟ್ ಬ್ಯಾಂಕ್ ಗಾಗಿ ಸಿದ್ದರಾಮಯ್ಯ ಯುದ್ಧ ಬೇಡ ಅಂತಾರೆ, ಪಾಕಿಸ್ತಾನದ ಮಾಧ್ಯಮದಲ್ಲಿಯೂ ಸಿದ್ದರಾಮಯ್ಯ ಮಿಂಚಿದ್ರು, ಒಟ್ಟಿನಲ್ಲಿ ಅವರಿಗೆ ವೋಟ್ ಬ್ಯಾಂಕ್ ಅಷ್ಟೇ ಬೇಕೇ ಹೊರತು ಇನ್ನೇನು ಬೇಕಾಗಿಲ್ಲ. ಇದರಿಂದಾಗಿಯೇ ನಾವೇನೇ ಮಾಡಿದರೂ ಕಾಂಗ್ರೆಸ್ ಸರ್ಕಾರ ಇದೆ ಎಂದು  ಮುಸಲ್ಮಾನ್ ಗುಂಡಾಗಳು ತಲೆ ಎತ್ತಿ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ, ಮೈಸೂರು, ಗುಲ್ಬರ್ಗ, ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಗಲಭೆ ಮಾಡಿದ ಮುಸಲ್ಮಾನರನ್ನು  ಅಮಾಯಕರು ಅನ್ನುತ್ತಾರೆ. ಕೋಮುವಾದಿಗಳನ್ನು ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರದ ಆಸೆಗಾಗಿ ದೇಶವನ್ನು ತುಂಡು ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಶಾಂತಿಯ ತೋಟ ಮಾಡುವ ಬದಲು ತೋಟದಲ್ಲಿ ಶಾಂತಿ ಮಾಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.




Previous Post Next Post