ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 99% ಪಡೆದ ಹೊಸನಗರದ ಯಶಸ್ವಿನಿ
ಹೊಸನಗರ : 2024 -25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶದಲ್ಲಿ ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯ ಶಾಲೆಯ ವಿದ್ಯಾರ್ಥಿನಿ 99.52% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಹೊಸನಗರದ ಕಾಳಿಕಾಪುರ ನಿವಾಸಿಯಾಗಿರುವ ಓಂಕಾರ್ ಹಾಗೂ ಲತಾ ದಂಪತಿಗಳ ಪುತ್ರಿಯಾಗಿರುವ ಯಶಸ್ವಿನಿ 625 ಅಂಕಗಳಿಗೆ 622 ಅಂಕ ಪಡೆದಿದ್ದಾರೆ.
ಯಶಸ್ವಿನಿಗೆ ಶಾಲೆಯ ಶಿಕ್ಷಕರು ಪೋಷಕರು, ಸ್ನೇಹಿತರು ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
Tags:
ಎಸ್ ಎಸ್ ಎಲ್ ಸಿ
