ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 98% ಪಡೆದ ಮಾಳೂರಿನ ಅಪೇಕ್ಷಾ
ತೀರ್ಥಹಳ್ಳಿ : 2024 -25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ 98.08% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಬೆಜ್ಜವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಳೂರಿನ ಪ್ರಮೋದ್ ಹಾಗೂ ಶ್ರೀಲತಾ ದಂಪತಿಗಳ ಪುತ್ರಿಯಾಗಿರುವ ಅಪೇಕ್ಷಾ 625 ಅಂಕಗಳಿಗೆ 613 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಪೇಕ್ಷಾ ತಂದೆ ಬೆಜ್ಜವಳ್ಳಿ ಗ್ರಾಮಪಂಚಾಯಿತಿಯಲ್ಲಿ ಕೆಲಸ ಮಾಡುತ್ತಾರೆ.
ಅಪೇಕ್ಷಾಗೆ ಶಾಲೆಯ ಶಿಕ್ಷಕರು ಪೋಷಕರು, ಗ್ರಾಮಪಂಚಾಯಿತಿ ಆಡಳಿತ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
Tags:
ಎಸ್ ಎಸ್ ಎಲ್ ಸಿ
