ಎಸ್ಎಸ್ಎಲ್'ಸಿ ಫಲಿತಾಂಶ - ತೀರ್ಥಹಳ್ಳಿ ಜಿಲ್ಲೆಯಲ್ಲೇ ಪ್ರಥಮ ಶಾಸಕ ಆರಗ ಅಭಿನಂದನೆ Araga jnanendra

 ಎಸ್ಎಸ್ಎಲ್'ಸಿ ಫಲಿತಾಂಶ - ತೀರ್ಥಹಳ್ಳಿ ಜಿಲ್ಲೆಯಲ್ಲೇ ಪ್ರಥಮ ಶಾಸಕ ಆರಗ ಅಭಿನಂದನೆ








ತೀರ್ಥಹಳ್ಳಿ : 2024-25 ನೇ ಸಾಲಿನ ಎಸ್ಎಸ್ಎಲ್'ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ್ದು ಈ ಫಲಿತಾಂಶಕ್ಕೆ ಕಾರಣರಾದ ಎಲ್ಲಾ ಶಾಲೆಗಳ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರಿಗೆ ಶಾಸಕ ಆರಗ ಜ್ಞಾನೇಂದ್ರ ಮನದಾಳದಿಂದ ಅಭಿನಂದಿಸಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಸೇರಿದಂತೆ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಎರೆಡೆರಡು ಭಾರಿ ಕರೆದು ಸಭೆ ನಡೆಸಿ ಉತ್ತಮ ಫಲಿತಾಂಶ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಬಗ್ಗೆ ಚರ್ಚಿಸಲಾಗಿತ್ತು, ಎಲ್ಲಾ ಅಧ್ಯಾಪಕರು ವಿಶೇಷ ಗಮನ ಹರಿಸಿದ್ದರ ಪರಿಣಾಮ ಈ ಉತ್ತಮ ಫಲಿತಾಂಶ ಬಂದಿದೆ. ಸರ್ಕಾರಿ  ಶಾಲೆಗಳ ಶಾಲಾಭಿವೃದ್ಧಿ ಸಮಿತಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.

ಹೊಸನಗರ ತಾಲೂಕಿನ ತೀರ್ಥಹಳ್ಳಿ ಕ್ಷೇತ್ರದ ಶಾಲೆಗಳು ಕೂಡ ಉತ್ತಮ ಫಲಿತಾಂಶ ಪಡೆದಿದ್ದು ಆ ಎಲ್ಲಾ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು, ಶಾಲಾಭಿವೃದ್ದಿ ಸಮಿತಿ ಮತ್ತು ಆಡಳಿತ ಮಂಡಳಿಯವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ಜಿಲ್ಲೆಯಲ್ಲೇ ಪ್ರಥಮ ಪಡೆಯಲು ಕಾರಣರಾದ  ಇಲಾಖೆಯ ಎಲ್ಲಾ ನೌಕರರು ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಹೊಸನಗರದ ಕೃಷ್ಣಮೂರ್ತಿಗೆ ವಿಶೇಷ ಅಭಿನಂದನೆ ಸಲ್ಲಿಸಿರುವ ಶಾಸಕರು, ಶೈಕ್ಷಣಿಕ ಪ್ರಗತಿ ಸಾಧಿಸಿದ ಶಿವಮೊಗ್ಗ ತಾಲೂಕಿನ ತೀರ್ಥಹಳ್ಳಿ ಕ್ಷೇತ್ರದ ನಿದಿಗೆ ಹೋಬಳಿಯ ಪ್ರೌಢಶಾಲೆಗಳ ಮಕ್ಕಳಿಗೆ, ಶಿಕ್ಷಕ ವೃಂದಕ್ಕೂ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.





Previous Post Next Post