ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ 97% ಪಡೆದ ತೀರ್ಥಹಳ್ಳಿಯ ಸ್ಪಂದನ
ತೀರ್ಥಹಳ್ಳಿ : 2024 -25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶದಲ್ಲಿ ತೀರ್ಥಹಳ್ಳಿಯ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ 97.6% ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ.
ಪಟ್ಟಣದ ಬೆಟ್ಟಮಕ್ಕಿಯ ನಿವಾಸಿಯಾಗಿರುವ ಶ್ರೀನಿವಾಸ್ ಫ್ಲವರ್ ಸ್ಟೋರ್ ಮಾಲೀಕರಾದ ಶಿವಕುಮಾರ್ ಹಾಗೂ ಶಕುಂತಲಾ ದಂಪತಿಗಳ ಪುತ್ರಿಯಾಗಿರುವ ಸ್ಪಂದನಾ 625 ಅಂಕಗಳಿಗೆ 610 ಅಂಕ ಪಡೆದಿದ್ದಾರೆ.
ಸ್ಪಂದನಾ ಅವರಿಗೆ ಶಾಲೆಯ ಶಿಕ್ಷಕರು ಪೋಷಕರು, ಸ್ನೇಹಿತರು ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
Tags:
ಎಸ್ ಎಸ್ ಎಲ್ ಸಿ
