ಎಸ್ಎಸ್ಎಲ್'ಸಿ ಫಲಿತಾಂಶದಲ್ಲಿ ವಾಗ್ದೇವಿಗೆ 11 ರ‌್ಯಾಂಕ್ ಗಳು - vagdevi school

ಎಸ್ಎಸ್ಎಲ್'ಸಿ ಫಲಿತಾಂಶದಲ್ಲಿ ವಾಗ್ದೇವಿಗೆ 11  ರ‌್ಯಾಂಕ್ ಗಳು








ತೀರ್ಥಹಳ್ಳಿ : 2024 - 25 ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ - 01 ರ ಫಲಿತಾಂಶ ಪ್ರಕಟಗೊಂಡಿದ್ದು ಇದರಲ್ಲಿ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈ ವರ್ಷ ರಾಜ್ಯಕ್ಕೆ ಒಟ್ಟು 11 ರ‌್ಯಾಂಕ್ ಗಳು ಬಂದಿವೆ.

ಕಳೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ದಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದು ದಾಖಲೆ ಬರೆದಿದ್ದ ವಾಗ್ದೇವಿ ಶಿಕ್ಷಣ ಸಂಸ್ಥೆ ಈಗ ಎಸ್ಎಸ್ಎಲ್'ಸಿ ಫಲಿತಾಂಶದಲ್ಲಿ 11  ರ‌್ಯಾಂಕ್ ಗಳನ್ನು ಪಡೆಯುವ ಮೂಲಕ ಹೊಸದೊಂದು ದಾಖಲೆ ಬರೆದಿದೆ.

ಈ ಬಾರಿ ಒಟ್ಟು 113 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು ಅದರಲ್ಲಿ 33 ವಿದ್ಯಾರ್ಥಿಗಳು ಆರು ನೂರು ಅಂಕಕ್ಕಿಂತ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. 84 ಅತ್ಯುನ್ನತ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದು ಶಾಲೆಗೆ, ತಾಲ್ಲೂಕಿಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ..

ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ

ಪ್ರೇಕ್ಷಾ ಎಂ ಪೂಜಾರಿ (623- 3rd Rank)

ತೇಜಸ್ ಎಂ ಶೆಣೈ (623 - 3rd Rank)

ಶೀತಲ್ ಬಿ ವಿ (624- 4th Rank)

ಕನ್ನಿಕಾ ಜಿ ಶೆಟ್ಟಿ (621 – 5th Rank)

ನಿರೀಕ್ಷಾ ಪಿ ಆಚಾರ್ಯ (621 – 5th Rank)

ಸಾನಿಕಾ ಎಂ ಹೆಗಡೆ ( 621 - 5th Rank)

ತನು ಗೌಡ (620 - 6th Rank)

ಸಂಪ್ರೀತ್ ( 617 - 9th Rank)

ಶ್ರೇಯಾ ಕೆ ಎಂ (617 - 9th Rank)

ಸಾನ್ವಿ ಕೆ ಯು (616 - 10th Rank)

ಶಮಂತ್ ವೈ ಎಂ ( 616- 10th Rank)








Previous Post Next Post