ರಾಜ್ಯಕ್ಕೆ 4 ನೇ ಸ್ಥಾನ ಪಡೆದ ಹೊಸೂರು - ಗುಡ್ಡೇಕೇರಿ ಶಾಲೆಯ ಅಕ್ಷತಾ ಹೆಚ್ ಯು SSLC result

ರಾಜ್ಯಕ್ಕೆ 4 ನೇ ಸ್ಥಾನ ಪಡೆದ ಹೊಸೂರು - ಗುಡ್ಡೇಕೇರಿ ಶಾಲೆಯ ಅಕ್ಷತಾ ಹೆಚ್ ಯು 








ತೀರ್ಥಹಳ್ಳಿ :  ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವ ಕೆಲವು ಮಂದಿಗಳ ಮಧ್ಯೆ ಪ್ರತಿಯೊಂದು ಬಾರಿ ಪರೀಕ್ಷಾ ಫಲಿತಾಂಶ ದಲ್ಲಿ ಪ್ರಥಮ ಸ್ಥಾನ ಪಡೆಯುವ ವಿಶೇಷ ಶಾಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೊಸೂರು - ಗುಡ್ಡೇಕೇರಿ ಪ್ರೌಢ ಶಾಲೆ.

ಈ ಬಾರಿ ಹೊಸೂರು - ಗುಡ್ಡೇಕೇರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಸರ್ಕಾರಿ ಶಾಲೆಯ ಗತ್ತನ್ನು ಪ್ರಸ್ತುತ ಪಡಿಸಿದ್ದಾಳೆ. ಅಕ್ಷತಾ ಹೆಚ್ ಯು 625 ಅಂಕಗಳಿಗೆ 621 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ. ( K - 125, E - 100, H - 99, M - 99, S - 98 SS- 100 ) 

ಅಕ್ಷತಾಳ ಸಾಧನೆಗೆ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು, ಮುಖ್ಯ ಶಿಕ್ಷಕರು/ ಶಿಕ್ಷಕರು/ ಸಿಬ್ಬಂದಿ ವರ್ಗ,  ಪೋಷಕರು, ಸೇರಿದಂತೆ ಸರ್ವರೂ ಅಭಿನಂದನೆ ತಿಳಿಸಿದ್ದಾರೆ. 






Previous Post Next Post