ಯುವ ಮುಖಂಡ ಪೂರ್ಣೇಶ್ ಪೂಜಾರಿಗೆ ಮಾತೃ ವಿಯೋಗ tth

 ಯುವ ಮುಖಂಡ ಪೂರ್ಣೇಶ್ ಪೂಜಾರಿಗೆ ಮಾತೃ ವಿಯೋಗ



ತೀರ್ಥಹಳ್ಳಿ :  ತಾಲ್ಲೂಕಿನ ಮೇಲಿನ ಕುರುವಳ್ಳಿ ನಿವಾಸಿ ಯಶೋಧ ಗೋಪಾಲ ಪೂಜಾರಿ (67) ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. 


ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಮಾಜಿ ಉಪಾಧ್ಯಕ್ಷ, ಸಾಮಾಜಿಕ ಸೇವಕ ಗೋಪಾಲ ಪೂಜಾರಿ ಅವರ ಧರ್ಮಪತ್ನಿಯಾಗಿರುವ ಯಶೋಧ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.


ಅವರು ಪುತ್ರನಾದ ಬಿಜೆಪಿ ಯುವ ಮುಖಂಡ ಪೂರ್ಣೇಶ್ ಪೂಜಾರಿ ಸೇರಿ ಓರ್ವ ಪುತ್ರಿ, ಮೊಮ್ಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

Previous Post Next Post