ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಗೆ ಶೇ. 100 ಫಲಿತಾಂಶ Result

ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಎಸ್‌ಇ ಶಾಲೆಗೆ ಶೇ. 100 ಫಲಿತಾಂಶ

ನಿಧಾ.ಎ ಶೇಕ್ ಶೇ. 95.4%.ಫಲಿತಾಂಶದ ಮೂಲಕ ಟಾಪರ್







ತೀರ್ಥಹಳ್ಳಿ: ನಿರಂತರ 12 ವರ್ಷಗಳಿಂದ ಶೇಕಡ 100 ರಷ್ಟು ಫಲಿತಾಂಶದಲ್ಲಿ ಸಾಧನೆ ಮಾಡುತ್ತಿರುವ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌ಇ ಶಾಲೆಗೆ ಈ ಬಾರಿ ಸಹ ಶೇ. 100 ಫಲಿತಾಂಶ ಬಂದಿದೆ. ಈ ಬಾರಿ 45 ಮಂದಿ ಪರೀಕ್ಷೆ ಬರೆದಿದ್ದು ಅದರಲ್ಲಿ 22 ಉನ್ನತ ಶ್ರೇಣಿ , 23 ಪ್ರಥಮ ಶ್ರೇಣಿ  ಪಡೆದಿದ್ದಾರೆ.

ನಿಧಾ.ಎ ಶೇಕ್ 95.4% ಅಂಕ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಹೃತ್ತೂರ್ವಕವಾಗಿ ಅಭಿನಂದಿಸಿರುತ್ತಾರೆ.

Previous Post Next Post