ನಾಪತ್ತೆಯಾಗಿದ್ದ ಹಾಲಾಡಿಯ ವ್ಯಕ್ತಿ ಪತ್ತೆ !
ತೀರ್ಥಹಳ್ಳಿ : ಮೂಲತಃ ಹಾಲಾಡಿಯ ಕೀರ್ತೆಶ್ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ದಿ 29 ರಂದು ತೀರ್ಥಹಳ್ಳಿಯಲ್ಲಿ ಬಸ್ ಇಳಿದಿದ್ದಾರೆ, ಅವರ ಬ್ಯಾಗ್, ಪರ್ಸ್ ಮೊಬೈಲ್ ತೀರ್ಥಹಳ್ಳಿ ಸಹ್ಯಾದ್ರಿ ಪೆಟ್ರೋಲ್ ಬಂಕ್ ಬಳಿ ದೊರೆತಿದ್ದು ನಂತರ ನಾಪತ್ತೆಯಾಗಿದ್ದರು.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಿವಮೊಗ್ಗ ಸುದ್ದಿ ಮಾಧ್ಯಮ ಸುದ್ದಿ ಮಾಡಿತ್ತು. ಕೀರ್ತೆಶ್ ಸಂಜೆಯ ವೇಳೆ ತೀರ್ಥಹಳ್ಳಿಯ ಶಿವರಾಜಪುರದಲ್ಲಿ ಪತ್ತೆಯಾಗಿದ್ದು ಮೊದಲಿಗೆ ಪೊಲೀಸ್ ಠಾಣೆಗೆ ಕರೆದೋಯ್ದು ನಂತರ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಈ ವೇಳೆ ಕೀರ್ತೆಶ್ ಕುಟುಂಬದವರು ಈ ಹುಡುಕಾಟದಲ್ಲಿ ತೊಡಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
Tags:
ಫಲಶ್ರುತಿ ಸುದ್ದಿ
