ಹಾಲಾಡಿ ವ್ಯಕ್ತಿ ತೀರ್ಥಹಳ್ಳಿಯಲ್ಲಿ ನಾಪತ್ತೆ..!
ತೀರ್ಥಹಳ್ಳಿ: ಕುಂದಾಪುರ ಸಮೀಪದ ಹಾಲಾಡಿಯ ವ್ಯಕ್ತಿಯೋರ್ವ ತೀರ್ಥಹಳ್ಳಿಗೆ ಬಂದು ನಂತರದಲ್ಲಿ ನಾಪತ್ತೆಯಾಗಿದ್ದು ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕವರು ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಲು ಕೋರಲಾಗಿದೆ.
ದೂರಿನಲ್ಲಿ ಏನಿದೆ.!?
ದಿನಾಂಕ 28/04/2025 ರಂದು ಪಿರ್ಯಾದುದಾರರಾದ ಕೃಷ್ಣ ಬಿನ್ ವಿಜಯ, 42 ವರ್ಷ, ಕುಲಾಲ್ ಜನಾಂಗ, ಕಂಪ್ಯೂಟರ್ ಶಿಕ್ಷಕ ವೃತ್ತಿ, ವಾಸ ಹಾಲಾಡಿ, ಕುಂದಾಪುರ ತಾಲೂಕು ಠಾಣೆಗೆ ಹಾಜರಾಗಿ ನೀಡಿ ಗಣಕೀಕೃತ ದೂರಿನ ಸಾರಾಂಶವೆನೆಂದರೆ ತಮ್ಮ ತಮ್ಮನಾದ ಕೀರ್ತೇಶ್, 33 ವರ್ಷ ಈತನು ಬೆಂಗಳೂರಿನಿಂದ ಹಾಲಾಡಿಗೆ ಬರುವ ದುರ್ಗಾಂಬಾ ಬಸ್ ನಲ್ಲಿ ತೀರ್ಥಹಳ್ಳಿ ಮೂಲಕ ಈ ದಿನ ಬೆಳಗ್ಗಿನ ಜಾವ 04 AM ಸುಮಾರಿಗೆ ಬರುತ್ತಿರುವಾಗ ಹಾಲಾಡಿಯಲ್ಲಿ ಇಳಿಯುವ ಬದಲು ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಇಳಿದು ಅವನು ಅವನ ಬ್ಯಾಗ್ ಮತ್ತು ಮೊಬೈಲ್ ನ್ನು ಸಹ್ಯಾದ್ರಿ ಪೆಟ್ರೋಲ್ ಬಂಕ್ ಮುಂಭಾಂಗದಲ್ಲಿ ಇರಿಸಿ ಕಾಣೆಯಾಗಿದ್ದು ತನ್ನ ಸಹೋದರ ಮಾನಸಿಕ ಒತ್ತಡದಿಂದ ಇರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
