ಮಂಜುನಾಥ್ ಮೃತದೇಹದ ಮುಂದೆ ಕಣ್ಣೀರಾದ ಪತ್ನಿ,- ಧೈರ್ಯ ಹೇಳಿದ ಸಚಿವರು
ಶಿವಮೊಗ್ಗ : ಕಾಶ್ಮೀರದ ಪಹಾಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದವರ ಮೃತದೇಹಗಳ ರವಾನೆಗೆ ಅಂತಿಮ ಸಿದ್ಧತೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥೀವ ಶರೀರದ ಮುಂದೆ ಅವರ ಪತ್ನಿ ಪಲ್ಲವಿ ಕಣ್ಣಿರಾದರು. ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಲ್ಲವಿ ಅವರನ್ನು ಸಂತೈಸಿದರು.
ಅನಂತನಾಗ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಬೆಂಗಳೂರಿನ ಭರತ್ ಭೂಷಣ್, ಮಧುಸೂದನ್ ಸೋಮಿಶೆಟ್ಟಿ ಮತ್ತು ಶಿವಮೊಗ್ಗದ ಮಂಜುನಾಥ ರಾವ್ ಅವರ ಮೃತದೇಹಗಳು ಇಲ್ಲಿಯೇ ಇರಿಸಲಾಗಿದೆ.
ಇನ್ನು, ಮಂಜುನಾಥ್ ರಾವ್ ಅವರ ಮೃತದೇಹವನ್ನು ಪರಿಶೀಲಿಸಿದ ಅವರ ಪತ್ನಿ ಪಲ್ಲವಿ ಕಣ್ಣೀರಾದರು. ಸಚಿವ ಸಂತೋಷ್ ಲಾಡ್ ಅವರು ಪಲ್ಲವಿಯವರಿಗೆ ಸಮಾಧಾನ ಹೇಳಿ, ಧೈರ್ಯ ತುಂಬಿದರು.
