ಉಗ್ರರ ದಾಳಿ ಶಾಸಕ ಆರಗ ಜ್ಞಾನೇಂದ್ರ ಖಂಡನೆ..! Araga jnanendra

 ಉಗ್ರರ ದಾಳಿ ಶಾಸಕ ಆರಗ ಜ್ಞಾನೇಂದ್ರ ಖಂಡನೆ..!








ತೀರ್ಥಹಳ್ಳಿ : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿಯನ್ನು ಶಾಸಕ ಆರಗ ಜ್ಞಾನೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ಸೈನ್ಯ ಶಕ್ತಿಯನ್ನು ಎದುರಿಸುವ ಧೈರ್ಯ ಇಲ್ಲದ ಪಾಪಿಗಳು ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ಧರ್ಮ ಕೇಳಿ ಮಾಡುತ್ತಾರೆ ಎಂದರೆ ಅವರ ಧರ್ಮಾಂಧತೆಗೆ  ಧಿಕ್ಕಾವಿರಲಿ,  ಪಾಕಿಸ್ತಾನ ಮತ್ತು ಪಾಕಿಸ್ತಾನ ಪೋಶಿಸುತ್ತಿರುವ ಉಗ್ರರು ಇದಕ್ಕೆ ತಕ್ಕ ಬೆಲೆ ತೇರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ರೀತಿ ಧರ್ಮ ಕೇಳಿ ಕೊಲ್ಲುವ ಕೃತ್ಯ ಮಾಡಿದವರ ವಿರುದ್ಧ ಈಗಲಾದರೂ ಈ ದೇಶದ ಜನ ಧರ್ಮ, ಜಾತಿ, ಪಕ್ಷ ಮೀರಿ ಪ್ರತಿಭಟಿಸುವ ಕೆಲಸ ಮಾಡಬೇಕಿದೆ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಉಗ್ರರ ಈ ಕೃತ್ಯಕ್ಕೆ ಅವರದೇ ಭಾಷೆಯಲ್ಲಿ  ತಕ್ಕ ಉತ್ತರ ಕೊಟ್ಟೇ ಕೊಡುತ್ತದೆ.

ದಾಳಿ ಮಾಡಿದ ಸಂದರ್ಭದಲ್ಲಿ ಬದುಕಿದವರ ಮುಂದೆ ನಿಮ್ಮ ಮೋದಿಗೆ ಹೋಗಿ ಹೇಳಿ ಎಂದು ಕಳಿಸಿದ್ದೀರಿ, ಉಗ್ರಗಾಮಿಗಳೇ ನಿಮ್ಮ ಹುಟ್ಟಡಗಿಸುವ ಕಾರ್ಯಕ್ಕೆ  ನೀವೇ ಚಾಲನೆ ಕೊಟ್ಟಿದ್ದೀರಿ ಕಾದು ನೋಡಿ ಎಂದು ಶಾಸಕ ಆರಗ ಜ್ಞಾನೇಂದ್ರ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





Previous Post Next Post