ಕಾಶ್ಮೀರದಲ್ಲಿ ಉಗ್ರರಿಂದ ಹತರಾದ ಮಂಜುನಾಥ್ ರಾವ್ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ kimmane ratnakar

ಕಾಶ್ಮೀರದಲ್ಲಿ  ಉಗ್ರರಿಂದ ಹತರಾದ ಮಂಜುನಾಥ್ ರಾವ್ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ 









ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಹತರಾದ ಮಂಜುನಾಥ ರಾವ್ (47) ಅವರ ಶಿವಮೊಗ್ಗ ನಿವಾಸಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. 

ಮೃತರು ತೀರ್ಥಹಳ್ಳಿ ತುಂಗಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು ಮೃತ ಮಂಜುನಾಥ್ ರಾವ್ ಅವರ ತಂದೆ ಮಹಾಬಾಲ ರಾವ್ ತೀರ್ಥಹಳ್ಳಿಯ ಮ್ಯಾಮ್ಕೋಸ್ ನ ಉದ್ಯೋಗಿಯಾಗಿದ್ದರು...ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ದುಃಖ ತಪ್ತ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ದೊರೆಯಲಿ ಎಂದು ಕಂಬನಿ ಮಿಡಿದರು..

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ ಎಲ್ಲಾರೂ ಒಟ್ಟಾಗಿ ಈ ರೀತಿ ಘಟನೆಯಾಗದಂತೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕು. ಮಂಜುನಾಥ್ ಅವರ ಪತ್ನಿ ಕೂಡ ತೀರ್ಥಹಳ್ಳಿಯಲ್ಲಿ ಕೆಲಸ ಮಾಡಿದ್ದರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಅ ದೇವರು ನೀಡಲಿ ಎಂದರು.






Previous Post Next Post