ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದ ತೀರ್ಥಹಳ್ಳಿಯ ದೀಕ್ಷಾ
ಮರು ಮೌಲ್ಯಮಾಪನದಲ್ಲಿ ಮತ್ತೊಂದು ಅಂಕ
ತೀರ್ಥಹಳ್ಳಿ : ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದಿದ್ದರು ಸಹ ಒಂದು ಅಂಕದಿಂದ ಹಿನ್ನಡೆ ಅನುಭವಿಸಿದ್ದ ತೀರ್ಥಹಳ್ಳಿಯ ವಾಗ್ದೇವಿ ಪಿ ಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಮರುಮೌಲ್ಯಮಾಪನದಲ್ಲಿ 600 ಕ್ಕೆ 600 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಕೆಮಿಸ್ಟ್ರಿ ಯಲ್ಲಿ ಈ ಮೊದಲು 100 ಕ್ಕೆ 99 ಅಂಕ ನೀಡಲಾಗಿತ್ತು. ಮರುಮೌಲ್ಯಮಾಪನಕ್ಕೆ ದೀಕ್ಷಾ ಹಾಕಿದ್ದರು.ಮರುಮೌಲ್ಯಮಾಪನದಲ್ಲಿ 100ಕ್ಕೆ 100 ಅಂಕ ಸಿಕ್ಕಿದ್ದು ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆಯುವ ಮೂಲಕ ತೀರ್ಥಹಳ್ಳಿಯ ಹೆಸರನ್ನು ರಾಜ್ಯದಲ್ಲಿ ಹೆಸರು ಮಾಡುವಂತೆ ಮಾಡಿದ್ದಾರೆ.
ದೀಕ್ಷಾ ಅವರ ಮುಂದಿನ ಜೀವನ ಯಶಸ್ವಿಯಿಂದ ಕೂಡಿರಲಿ ಎಂದು ಶಿವಮೊಗ್ಗ ಸುದ್ದಿ ತಂಡ ಹಾರೈಸುತ್ತದೆ.
Tags:
ವಾಗ್ದೇವಿ ಶಾಲೆ
