ಸಿಎಂ ಸಿದ್ದರಾಮಯ್ಯ ಹೇಳಿಕೆ - ತುಷ್ಟಿಕರಣ ರಾಜಕಾರಣದ ಪರಮಾವಧಿ - ಶಾಸಕ ಆರಗ ಜ್ಞಾನೇಂದ್ರ Araga jnanendra

 ಸಿಎಂ ಸಿದ್ದರಾಮಯ್ಯ ಹೇಳಿಕೆ - ತುಷ್ಟಿಕರಣ ರಾಜಕಾರಣದ ಪರಮಾವಧಿ - ಶಾಸಕ ಆರಗ ಜ್ಞಾನೇಂದ್ರ







ತೀರ್ಥಹಳ್ಳಿ : ಪಹಲ್ಗಾಂವ್ ಉಗ್ರರ ದಾಳಿಯಲ್ಲಾದ 26 ಜನರ ಕುಟುಂಬಗಳ ಕಣ್ಣೀರು ಆರುವುದಕ್ಕಿಂತ ಮುಂಚೆ ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವುದು ತುಷ್ಟಿಕರಣ ರಾಜಕಾರಣದ ಪರಮಾವಧಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಪಾಕಿಸ್ತಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ದ ಎಂದು ಹೇಳಿದ್ದರೆ, ಸಿದ್ದರಾಮಯ್ಯ ಮಾತ್ರ ಅಲ್ಪ ಸಂಖ್ಯಾತರ ವೋಟಿಗಾಗಿ ಅಲ್ಪ ಸಂಖ್ಯಾತರಿಗೆ ಬೇರೆ ಸಂದೇಶ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಓಲೈಕೆ ರಾಜಕಾರಣವನ್ನು 26 ಜನರ ಶವದ ಮೇಲೆ ಮಾಡ ಹೊರಟಿರುವ ಸಿದ್ದರಾಮಯ್ಯನವರ ಈ ನಿಲುವಿಗೆ ಧಿಕ್ಕಾರವಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳಿದ್ದಿರಾ, ಎಲ್ಲರಿಗೂ ಬೇಕಾಗಿರುವುದು ಶಾಂತಿಯೇ, ಆದರೆ ಪದೇ ಪದೇ ನಾವೇ ಶಾಂತಿ ಸೌಹಾರ್ದತೆ ಬಯಸಬೇಕಾ? ಸಿದ್ದರಾಮಯ್ಯನವರೇ ಇದು ಒಂದು ದೇಶದ ಮಾನ ಅಪಮಾನದ ಪ್ರಶ್ನೆಯಿದೆ ಸ್ವಾಭಿಮಾನದ ಪ್ರಶ್ನೆ ಇದೆ, 26 ಜನ ಮರಣ ಹೊಂದಿದ ಕುಟುಂಬದವರಲ್ಲಿ ನಿಮ್ಮ ಹತ್ತಿರದವರು ಇರುತ್ತಿದ್ದರೆ ನಿಮ್ಮ ಹೇಳಿಕೆ ಹೀಗೆ ಇರುತ್ತಿತಾ? ಒಂದೊಮ್ಮೆ ನೀವು ಮತ್ತು ನಿಮ್ಮ ಮಂತ್ರಿ ಮಂಡಲದ ನಿಮ್ಮ ಜೊತೇನೇ ಇರುವ ಜಮೀರ್ ಪಹಲ್ಗಾಂವ್ ನಲ್ಲಿ ಇದ್ದಿದ್ದರೆ ಜಮೀರ್ ಮಾತ್ರ ವಾಪಾಸ್ ಬರುತ್ತಿದ್ದರು, ನಾನು ಸೆಕ್ಯುಲರ್ ನಾನು ಅಲ್ಪ ಸಂಖ್ಯಾತರ ಪರ ಎಂದು  ನೀವು ಏನೇ ಬಡಾಯಿಸಿಕೊಂಡಿದ್ದರು, ಉಗ್ರಗಾಮಿಗಳು ಜೀವಂತವಾಗಿ ನಿಮ್ಮನ್ನು ವಾಪಾಸ್ ಬರಲು ಬಿಡುತ್ತಿದ್ದರಾ? ಎಂದು ಪ್ರೆಶ್ನಿಸಿದ್ದಾರೆ.

ಈ ರೀತಿ ಧರ್ಮ ಕೇಳಿ ಸಾಯಿಸುವ ಹೀನ ಕೃತ್ಯ ನಡೆದ ಮೇಲೂ ನಿಮ್ಮ ಓಲೈಕೆ ರಾಜಕಾರಣ  ಮುಂದುವರಿಸಿದ್ದೀರಾ? ಸಿದ್ದರಾಮಯ್ಯನವರೇ ಈ ಮನೋಭಾವ ಬದಲಾಯಿಸದೇ ಇದ್ದರೆ ಇದರ ಮುಂದಿನ ಪರಿಣಾಮಗಳು ಈ ದೇಶಕ್ಕೆ ಸಮಾಜಕ್ಕೆ ಅಪಾಯಕಾರಿ ಆಗಿರುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ  ಎಚ್ಚರಿಸಿದ್ದಾರೆ.







Previous Post Next Post