ಮನೆಯಿಂದ ಹೊರಟ ಮಂಜುನಾಥ್ ಪಾರ್ಥಿವ ಶರೀರರದ ಅಂತಿಮ ಯಾತ್ರೆ !
ಶಿವಮೊಗ್ಗ : ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ ಅವರ ಪಾರ್ಥೀವ ಶರೀರವೂ ಸಾರ್ವಜನಿಕ ಅಂತಿಮ ದರ್ಶನ ಮುಗಿಸಿ ಅಂತಿಮಯಾತ್ರೆಗಾಗಿ ಲಾರಿಗೆ ತಂದು ಇರಿಸಲಾಗಿದೆ.
ಮಂಜುನಾಥ್ ಮಂಗಳವಾರ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಅವರ ಪಾರ್ಥೀವ ಶರೀರ ಇಂದು ಶಿವಮೊಗ್ಗಕ್ಕೆ ಬಂದಿದ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ ಎಂಎಲ್ ಸಿ ಧನಂಜಯ ಸರ್ಜಿ, ಬಲ್ಕಿಸ್ ಭಾನು, ಮಾಜಿ ಸಚಿವ ರೇಣುಕಾಚಾರ್ಯ ಮೊದಲಾದ ನಾಯಕರು ಅಂತಿಮ ದರ್ಶನ ಪಡೆದರು.
ಹಿಂದೂ ಸಂಘಟನೆಗಳು ಕೇಸರಿ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಿದರೆ ಸಂಸದ ರಾಘವೇಂದ್ರ ಶವದೊಂದಿಗೆ ವಾಹನದಲ್ಲಿ ಸಾಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ.
