ತೀರ್ಥಹಳ್ಳಿಯ 19 ವರ್ಷದ ಯುವತಿ ನಿಗೂಢವಾಗಿ ಕಣ್ಮರೆ..!
ತೀರ್ಥಹಳ್ಳಿ : ತಾಲೂಕಿನ ಹೊನ್ನೆತಾಳು ಗ್ರಾಮದ ಯುವತಿಯೋರ್ವಳು ನಿಗೂಢವಾಗಿ ಕಣ್ಮರೆಯಾದ ಘಟನೆ ನಡೆದಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಎಂಬುವವರ ಪುತ್ರಿ, 19 ವರ್ಷದ ಪ್ರಿಯಾಂಕ ಅಲಿಯಾಸ್ ಪಾರ್ವತಿ ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ.ಯುವತಿಯು ಬ್ರಹ್ಮಾವರದ ಸತ್ಯನಾಥ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಏ. 21 ರಂದು ಬೆಳಿಗ್ಗೆ 9 ಗಂಟೆಗೆ ಬ್ರಹ್ಮಾವರಕ್ಕೆ ಹೋಗುವುದಾಗಿ ಯುವತಿ ಮನೆಯಿಂದ ತೆರಳಿದ್ದರು. ತದನಂತರ ಅವರ ಸುಳಿವು ಲಭ್ಯವಾಗಿಲ್ಲ. ಅವರ ಕುರಿತಂತೆ ಎಲ್ಲಿಯೂ ಮಾಹಿತಿ ಲಭಿಸಿಲ್ಲ.
ನಾಪತ್ತೆಯಾದ ಯುವತಿಯು 4 ಅಡಿ 5 ಇಂಚು ಎತ್ತರ, ಕೋಲುಮುಖ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡಕೈ ಮುಂಗೈ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ MOM DAD ಮತ್ತು Priya ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾರೆ.
ಕನ್ನಡ ಮಾತನಾಡಲು, ಓದಲು ಬರೆಯಲು ಬಲ್ಲವರಾಗಿದ್ದು, ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಸದರಿ ಯುವತಿಯ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ದೂರವಾಣಿ :- 08182-261400, ತೀರ್ಥಹಳ್ಳಿ ಪೊಲೀಸ್ ಠಾಣೆ :- 08181 – 220388, ಮಾಳೂರು ಪೊಲೀಸ್ ಠಾಣೆ :- 9480803333, ಆಗುಂಬೆ ಪೊಲೀಸ್ ಠಾಣೆ :- 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
