ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಕಾಂಗ್ರೆಸ್ ಸರ್ಕಾರ ಬರೆ ಎಳೆಯುತ್ತಿದೆ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಸರ್ಕಾರ ಬದಲಾವಣೆ ಆದ ನಂತರ
ಜನರು ನಮ್ಮೆಲ್ಲರ ಬದುಕು ಬದಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾಯಿತು. ಏನಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿತು. ಈಗ ಸರ್ಕಾರ ನಡೆಸಲು ಹಣವಿಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆ ಖಂಡಿಸಿ ಕೊಪ್ಪ ಸರ್ಕಲ್ ನ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಒಂದು ವರ್ಷಕ್ಕೆ ಗ್ಯಾರೆಂಟಿ ಯೋಜನೆಗೆ 56 ಸಾವಿರ ಕೋಟಿ ಹಣ ಬೇಕು. ಹಣ ಎಲ್ಲಿಂದ ತರುತ್ತೀರಾ? ಎಂದು ಕೇಳಿದರೆ, 40% ಕಮಿಷನ್, ಹಿಂದಿನ ಸರ್ಕಾರ ಏನು ಮಾಡಿತ್ತೋ ಅದನ್ನ ಉಳಿಸಿಕೊಂಡು ಹೋದರೆ ಗ್ಯಾರೆಂಟಿ ಯೋಜನೆಗೆ ಹಣ ಕೊಡಬಹುದು. ಈಗ ಗ್ಯಾರಂಟಿ ಕೊಡಲು ಹಣವಿಲ್ಲ, ಅಭಿವೃದ್ಧಿಗೂ ಹಣವಿಲ್ಲದ ಪರಿಸ್ಥಿತಿಗೆ ಸರ್ಕಾರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಮುಸಲ್ಮಾನ ಗುತ್ತಿಗೆದಾರರಿಗೆ 4% ರಿಸರ್ವೇಷನ್ ಕೊಟ್ಟಿದ್ದಾರೆ. ಅಸಹಾಯಕರಿಗೆ
ಬಡವರಿಗೆ ರಿಸರ್ವೇಷನ್ ಕೊಡುವುದು ಬಿಟ್ಟು ಕಂಟ್ರಾಕ್ಟರ್ ಗೆ ನೀಡಿದ್ದಾರೆ. ಗುತ್ತಿಗೆದಾರರು ಬಡವರ ಎಂದು ಪ್ರೆಶ್ನೆ ಮಾಡಿದರು. ಬಜೆಟ್ ನಲ್ಲಿ ಅರ್ಧಕ್ಕಿಂತ ಹೆಚ್ಚು ಮುಸಲ್ಮಾನರಿಗಾಗಿ ಹಣ ಇಟ್ಟಿದ್ದಾರೆ. 250 ಮೌಲಾನ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಗೆ 500 ಕೋಟಿ, 100 ಉರ್ದು ಮಾಧ್ಯಮ ಶಾಲೆ ಅಭಿವೃದ್ಧಿ ಮಾಡಲು 400 ಕೋಟಿ, 62 ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ತೆರೆಯಲು 100 ಕೋಟಿ, ಮದರಸಾಗಳಲ್ಲಿ ಅಗತ್ಯ ಸೌಲಭ್ಯಗಳಿಗಾಗಿ 100 ಕೋಟಿ, 16 ಹೊಸ ಉರ್ದು ಮಹಿಳಾ ಕಾಲೇಜು, 169 ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ 25 ಸಾವಿರ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ, ಅಂದರೆ ಕರಾಟೆ ಕಲಿಯಲು, ಯಾರಾದರೂ ಮುಸ್ಲಿಂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲು ಹೋಗಿದ್ದಾರಾ..? ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಗುತ್ತಿದೆ, ನಿಜವಾಗಿಯೂ ಹಿಂದೂ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಬೇಕು, ಇದು ಉಲ್ಟಾ ಆಗಿದೆ ಎಂದು ತಿಳಿಸಿದರು.
ನಮ್ಮ ಮಕ್ಕಳು ಹಾಗೆ ಮುಸಲ್ಮಾನ ಮಕ್ಕಳು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದರೆ, ಹಾಸ್ಟೆಲ್ ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದರೆ, ಗ್ರೌಂಡ್ ಗಳಲ್ಲಿ ಆಟ ಆಡಿದರೆ ನಾನು ನೀನು ಬೇರೆ ಅಲ್ಲ ಎನ್ನುವುದು ಬರುತ್ತದೆ. ಮನಸುಗಳು ಒಂದಾಗುತ್ತವೆ. ಆದರೆ ಕಾಂಗ್ರೆಸ್ ಸರ್ಕಾರ ಒಂದಾಗಲು ಬಿಡುವುದಿಲ್ಲ. ಭವಿಷ್ಯದಲ್ಲಿ ಕರ್ನಾಟಕ ವನ್ನು ಏನು ಮಾಡಲು ಹೊರಟಿದ್ದಾರೆ, ಧರ್ಮದ ಆಧಾರದಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಡ ಪ್ರಕರಣದ ಬಗ್ಗೆ ಮಾತನಾಡಿ ನಾನು ಪ್ರಾಮಾಣಿಕ ಎಂದು ಎದೆ ತಟ್ಟಿಕೊಂಡು ಹೇಳುವ ಮುಖ್ಯಮಂತ್ರಿ ಗಳಿಗೆ ನಾಚಿಕೆ ಆಗಬೇಕು, ಪ್ರಕರಣ ಆಗುತ್ತಿದ್ದಂತೆ ಸೈಟ್ ವಾಪಾಸ್ ಕೊಡುತ್ತೀನಿ ಎನ್ನುತ್ತಾರೆ, ಭ್ರಷ್ಟಾಚಾರ ಮಾಡಲಿಲ್ಲ ಎಂದ
ಮೇಲೆ ಸೈಟ್ ವಾಪಾಸ್ ಕೊಡುವುದು ಏಕೆ?
ತೀರ್ಥಹಳ್ಳಿ ಯಲ್ಲಿ ಒಬ್ಬ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ. ಅವನು ನಾನು ಕದ್ದಿರುವುದನ್ನು ವಾಪಾಸ್ ಕೊಡುತ್ತೇನೆ ನನ್ನನ್ನು ಬಿಡಿ ಎಂದು ಹೇಳಿದನಂತೆ, ಬಿಡಲು ಆಗುವುದಿಲ್ಲ ಎಂದು ಪೊಲೀಸರು ಹೇಳಿದ್ದಕ್ಕೆ, ಸಿದ್ದರಾಮಯ್ಯ ನನ್ನೇ ಬಿಟ್ಟಿದ್ದೀರಾ? ನನ್ನನ್ನು ಬಿಡಲು ಆಗುವುದಿಲ್ಲವೇ? ಸಿದ್ದರಾಮಯ್ಯ ನವರಿಗೆ ಒಂದು ಕಾನೂನು? ನನಗೆ ಒಂದು ಕಾನುನಾ? ಎಂದು ಪ್ರೆಶ್ನೆ ಮಾಡಿದನಂತೆ ಎಂದು ಆರಗ ಜ್ಞಾನೇಂದ್ರ ಮಾತನಾಡುವಾಗ ಹೇಳಿದರು..
ಈ ಸಂದರ್ಭದಲ್ಲಿ ನವೀನ್ ಹೆದ್ದೂರು, ಕುಕ್ಕೆ ಪ್ರಶಾಂತ್, ನಾಗರಾಜ್ ಶೆಟ್ಟಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್ ಸೇರಿ ಹಲವರು ಉಪಸ್ಥಿತರಿದ್ದರು.
