ಭದ್ರಾ ನದಿ ಪಾಲಾದ ಮಗ, ತಂದೆಗಾಗಿ ಶೋಧ..! Bhadra river

 ಭದ್ರಾ ನದಿ ಪಾಲಾದ ಮಗ, ತಂದೆಗಾಗಿ ಶೋಧ..!







ಭದ್ರಾವತಿ : ಭದ್ರಾ ನದಿಗೆ ಇಳಿದಿದ್ದ ಮಗನನ್ನ ರಕ್ಚಿಸಲು ಹೋದ ತಂದೆಯೂ ಸಹ ನೀರು ಪಾಲಾಗಿದ್ದಾರೆ. ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ.

ಘಟನೆ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ 14 ವರ್ಷದ ಪುತ್ರ ಜಾವದ್ ಮತ್ತು ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ ಪುತ್ರ ಜಾವಾದ್ ಹಿನ್ನೀರಿನಲ್ಲಿ ಇಳಿದಿದ್ದಾನೆ. ನೀರಿನ‌ ಅಳತೆಯನ್ನ‌ ಅಂದಾಜಿಸದ ಜಾವದ್ ನೀರು ಪಾಲಾಗಿದ್ದಾನೆ. ಆತನನ್ನ ರಕ್ಷಿಸಲು ತಂದೆ ಜಾಬರ್ ನೀರಿಗೆ ಇಳಿದು ನೀರುಪಾಲಾಗಿದ್ದಾರೆ.  

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾದ ಜಾವದ್ ಶವವಾಗಿ ಪತ್ತೆಯಾದರೆ ತಂದೆ ಜಾಬರ್ ನ ಹುಡುಕಾಟ ನಡೆದಿದೆ. 






Previous Post Next Post