ಆದರ್ಶಗಳನ್ನು ಬದುಕಿನಲ್ಲಿ ಬೆಳೆಸಕೊಂಡಿಲ್ಲ ಎಂದರೆ ಆ ಬದುಕು ವ್ಯರ್ಥವಾಗುತ್ತದೆ - ಜ್ಯೋತಿ ಮೋಹನ್
ತೀರ್ಥಹಳ್ಳಿ : ಈಗಿನ ಮಕ್ಕಳಿಗೆ ಮೊಬೈಲ್ ಕೊಡುವ ಮೂಲಕ ಮನೆಯಲ್ಲಿ ಮಾತೆ ಆಡದಂತೆ ಮಾಡಿದ್ದಾರೆ. ಹಿಂದೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಹಾಗೆಮಾತನಾಡುವ ಕಾಲವಿತ್ತು. ಆದರೆ ಈಗ ಮಕ್ಕಳ ಜೊತೆಗೆ ಪೋಷಕರು ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳಿಗೆ ತೋರಿಸುವ ಪ್ರೀತಿ ಕಡಿಮೆ ಆಗುತ್ತಿದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಪ್ರೀತಿ ಕೊಟ್ಟು ಸರಿಯಾಗಿ ಬೆಳಸಿದರೆ ಆ ಮಕ್ಕಳು ದಾರಿ ತಪ್ಪುವುದಿಲ್ಲ ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ಜ್ಯೋತಿ ಮೋಹನ್ ತಿಳಿಸಿದರು.
ಭಾನುವಾರ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಮಹಿಳೆಯರಲ್ಲಿ ಅರಿವಿನ ಜೊತೆಗೆ ಜಾಗೃತಿ ಮೂಡಿಸುವ ವಿಶೇವಾದ ಕಾರ್ಯಕ್ರದಲ್ಲಿ ಮಾತನಾಡಿದರು.
ಸುಸ್ತಿರ ಹಾಗೂ ಆರೋಗ್ಯಕರವಾದ ಸಮಾಜ ನಿರ್ಮಾಣ ಆಗಬೇಕು. ಯಾವುದೇ ವ್ಯಕ್ತಿ ಆಗಿರಲಿ ಸಾಧನೆ ಮಾಡದೇ ಸತ್ತರೆ ಆ ಸಾವಿಗೆ ಬೆಲೆ ಇಲ್ಲದಂತೆ. ಆದರ್ಶಗಳನ್ನು ಬದುಕಿನಲ್ಲಿ ಬೆಳೆಸಕೊಂಡಿಲ್ಲ ಎಂದರೆ ಆ ಬದುಕು ವ್ಯರ್ಥವಾಗುತ್ತದೆ. ವ್ಯಕ್ತಿತ್ವಕ್ಕೆ ಯಾವಾಗ ಶ್ರೇಷ್ಠತೆ ಬರುತ್ತದೆ ಎಂದರೆ ಸಮಾಜಕ್ಕೆ ಆಗಲಿ ಅಥವಾ ತಮ್ಮ ನೆರೆ ಹೊರೆಯವರಿಗೆ ಆಗಲಿ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುವ ಬಗ್ಗೆ ಯೋಚಿಸಿದರೆ ಸಮಾಜ ಹಾಗೂ ಕುಟುಂಬ ಪದ್ಧತಿ ಸರಿಯಾಗಿ ಇರಲಿದೆ ಎಂದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೌನ್ಸಿಲಿಂಗ್ ಮತ್ತು ಸೈಕೋ ತೆರೆಪಿಯಲ್ಲಿ ವಿಶೇಷ ಅಧ್ಯಯನ ಮಾಡಿ ಈಗಾಗಲೇ ಅನೇಕ ಮಾಹಿತಿ ಶಿಬಿರ ದಲ್ಲಿ ಅನೇಕ ಮಹಿಳೆಯರಿಗೆ ಮಾಹಿತಿಯನ್ನು ಕೊಡುತ್ತ ಶಾಲಾ ಕಾಲೇಜ್ ಗಳಲ್ಲಿ ಅನೇಕ ಮಕ್ಕಳಿಗೆ ಕೌನ್ಸಲಿಂಗ್ ಮಾಡಿರುವ ವಿನುತಾ ಮುರಳೀಧರ್ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿರುವ ಕ್ಯಾನ್ಸರ್ ಹಾಗೆ 35 ರಿಂದ 40 ವರ್ಷ ವಯಸ್ಸಿನ ನಂತರ ಮಹಿಳೆಯರಲ್ಲಿ ಆಗುವ ಹಾರ್ಮೋನ್ ಗಳ ಅಸಮತೋಲನ ಇದರಿಂದ ಅವಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಏರುಪೆರು, ಆತಂಕ, ಮತ್ತು ಹಲವು ಬಗೆಯ ತೊಂದರೆಗಳು, ಹಾಗೆ ಈ ಎಲ್ಲಾ ತೊಂದರೆಗಳಿಂದ ಮಹಿಳೆಯರಲ್ಲಿ ಕಾಡುವ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೆಯೇ ನಮ್ಮ ಮನೆಯಲ್ಲಿ ಉಪಯೋಗಿಸುವ ಆಹಾರ ಮತ್ತು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಅನುಸರಿಸಬೇಕಾದ ಕೆಲವೊಂದು ಪದ್ಧತಿಗಳ ಬಗ್ಗೆ ಸವಿಸ್ತಾರವಾಗಿ ಮಹಿಳೆಯರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರು ತಮ್ಮಲ್ಲಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಏನು ಮಾಡಬಹುದು ಎಂದು ಕೇಳಿ ತಿಳಿದುಕೊಂಡರು. ಈ ವೇಳೆ 37 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಭಾಗ್ಯಲಕ್ಷ್ಮಿ ಮಾತಾಜಿಯವರಿಗೆ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ರೀತಿಯಾದ ಕಾರ್ಯಕ್ರಗಳನ್ನು ಪಟ್ಟಣ ದಲ್ಲಿ ಅಷ್ಟೇ ಅಲ್ಲದೆ ಪ್ರತಿಯೊಂದು ಗ್ರಾಮಗಳಲ್ಲಿ ಮಾಡಬೇಕು ಎಂಬ ವಿಶೇಷ ಯೋಜನೆಯನ್ನು ಜ್ಯೋತಿ ಮೋಹನ್ ಹಾಗೂ ವಿನುತಾ ಮುರಳೀಧರ್ ಹೊಂದಿದ್ದು ಇವರ ಜೊತೆಗೆ ಮಹಿಳೆಯರು ಜೊತೆಯಾಗಿ ಮಹಿಳೆಯರಲ್ಲಿ ಅರಿವಿನ ಜೊತೆಗೆ ಜಾಗೃತಿ ಮೂಡಿಸುವ ವಿಶೇವಾದ ಕಾರ್ಯಕ್ರದಲ್ಲಿ ಭಾಗವಹಿಸಬಹುದು
