ಮೇಳಿಗೆಯಲ್ಲಿ ಆಕಸ್ಮಿಕ ಬೆಂಕಿ - ಅಗ್ನಿಶಾಮಾಕದಳದಿಂದ ಕಾರ್ಯಾಚರಣೆ Melige

ಮೇಳಿಗೆಯಲ್ಲಿ ಆಕಸ್ಮಿಕ ಬೆಂಕಿ - ಅಗ್ನಿಶಾಮಾಕದಳದಿಂದ ಕಾರ್ಯಾಚರಣೆ 



ತೀರ್ಥಹಳ್ಳಿ : ತಾಲೂಕಿನ ಮೇಳಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೇಳಿಗೆ ಗ್ರಾಮಪಂಚಾಯಿತಿ ಹಿಂಭಾಗ ಅರಣ್ಯ ಪ್ರದೇಶದ ನಡುತೋಪಿಗೆ ಆಕಸ್ಮಿಕ ವಾಗಿ ಬೆಂಕಿ ಬಿದ್ದು ಬಿಸಿಲಿನ ಆರ್ಭಟಕ್ಕೆ ಅರಣ್ಯ ಪ್ರದೇಶದಲ್ಲಿ ನೆಟ್ಟ ಗಿಡಗಳು ಧಗ ಧಗನೇ ಹೊತ್ತಿ ಉರಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.


ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಗ್ರಾಮಪಂಚಾಯಿತಿ ಆಡಳಿತಾಧಿಕಾರಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿ ಅನೇಕರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣದಿಂದ ಬೆಂಕಿ ಅರಣ್ಯವನ್ನು ಸಂಪೂರ್ಣ ಹೊತ್ತಿಕೊಂಡಿದೆ.  ನಂತರ ಅಗ್ನಿಶಾಮಕದಳದವರಿಗೆ ಕರೆ ಮಾಡಿ ಬರಲು ತಿಳಿಸಿದ್ದಾರೆ.


ಅಗ್ನಿಶಾಮಾಕದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ. 


Previous Post Next Post