ಚಿಟ್ಟೆಬೈಲು ಬಳಿ ಆಕಸ್ಮಿಕ ಬೆಂಕಿ - ಅಗ್ನಿಶಾಮಾಕದಳದಿಂದ ಬೆಂಕಿ ನಂದಿಸಲು ಹರಸಾಹಸ
ತೀರ್ಥಹಳ್ಳಿ : ತಾಲೂಕಿನ ಹೊದಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಟ್ಟೆಬೈಲು ಬಳಯ ಪ್ರಜ್ಞಾಭಾರತಿ ಶಾಲೆಯ ಸಮೀಪ ಅರಣ್ಯ ಪ್ರದೇಶದ ನಡುತೋಪಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಬಿಸಿಲಿನ ಆರ್ಭಟಕ್ಕೆ ಅರಣ್ಯ ಪ್ರದೇಶದಲ್ಲಿ ನೆಟ್ಟ ಗಿಡಗಳು ಧಗ ಧಗನೇ ಹೊತ್ತಿ ಉರಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣದಿಂದ ಬೆಂಕಿ ಅರಣ್ಯವನ್ನು ಸಂಪೂರ್ಣ ಹೊತ್ತಿಕೊಂಡಿದೆ. ನಂತರ ಅಗ್ನಿಶಾಮಕದಳದವರಿಗೆ ಕರೆ ಮಾಡಿ ಬರಲು ತಿಳಿಸಿದ್ದಾರೆ. ಅಗ್ನಿಶಾಮಾಕದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿದ್ದು ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿದ್ದಾರೆ.
ಇದು ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಬೇಕೆಂದೆ ಬೆಂಕಿ ಹಾಕಿದ್ದ ಅಥವಾ ಧೂಮಪಾನ ಮಾಡಿ ಅದರಿಂದ ಬೆಂಕಿ ಹತ್ತಿಕೊಂಡಿದ್ದ ತಿಳಿದಿಲ್ಲ. ಒಟ್ಟಿನಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಧಗ ಧಗಿಸುತ್ತಿದೆ.
