ನಾಳೆ ತೀರ್ಥಹಳ್ಳಿಯಲ್ಲಿ ಕಾಲ್ನಡಿಗೆ ಜಾಥಾ WALKATHON

 ನಾಳೆ ತೀರ್ಥಹಳ್ಳಿಯಲ್ಲಿ ಕಾಲ್ನಡಿಗೆ ಜಾಥಾ



ತೀರ್ಥಹಳ್ಳಿ : ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ "WALKATHON" (ಕಾಲ್ನಡಿಗೆ ಜಾಥಾ) ಆಯೋಜಿಸಲಾಗಿದ್ದು ಮಂಡಲ ಯುವಮೋರ್ಚಾದ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮಂಡಲ ಮೋರ್ಚಾ ಅಧ್ಯಕ್ಷರಾದ ಸಂತೋಷ ದೇವಾಡಿಗ ತಿಳಿಸಿದ್ದಾರೆ.

ಪಟ್ಟಣದ ಕುಶಾವತಿ ಪಾರ್ಕ್ ನಿಂದ ಹೊರಟು ಆರ್.ಎಂ. ಸಿ ಯಾರ್ಡ್ ವರೆಗೆ ನಾಳೆ ಬೆಳಗ್ಗೆ 8.30ಕ್ಕೆ ಜಾಥಾ ಆರಂಭವಾಗಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಆರಗ ಜ್ಞಾನೇಂದ್ರರವರು ಹಾಗೂ ಮಂಡಲ ಬಿಜೆಪಿ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀ ನವೀನ್ ಹೆದ್ದೂರ್  ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ  ಪ್ರಶಾಂತ್ ಕುಕ್ಕೆ ಹಾಗೂ ಮಂಡಲ ಯುವಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ವಹಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚು ಕಾರ್ಯಕರ್ತರು ಭಾಗಿಯಾಗುವಂತೆ ಮನವಿ ಮಾಡಲಾಗಿದೆ.








Previous Post Next Post