ಕಾಂಗ್ರೆಸ್ ಪ್ರಭಾವಿ ಮುಖಂಡರೊಬ್ಬರು ಬಿಜೆಪಿ ಸೇರ್ತಾರ..!? ಏನಿದು ಬಿಗ್ ಸ್ಟೋರಿ! Big news

ಕಾಂಗ್ರೆಸ್ ಪ್ರಭಾವಿ ಮುಖಂಡರೊಬ್ಬರು ಬಿಜೆಪಿ ಸೇರ್ತಾರ..!? ಏನಿದು ಬಿಗ್ ಸ್ಟೋರಿ!


ತೀರ್ಥಹಳ್ಳಿ : ಚುನಾವಣೆ ಬಂತು ಎಂದರೆ ತೀರ್ಥಹಳ್ಳಿ ಒಂದು ರೀತಿಯ ಹಾಟ್ ಸ್ಪಾಟ್, ಇಲ್ಲಿಯವರೆಗೆ ಘಟಾನುಘಟಿಗಳು ಸ್ಪರ್ಧೆ ಮಾಡಿರುವ ಕ್ಷೇತ್ರ. ಈಗ ಇಂತಹ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡರೊಬ್ಬರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.

ಹೌದು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ವ್ಯಕ್ತಿಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ, ಈಗಾಗಲೇ ಬಿಜೆಪಿ ನಾಯಕರ ಜೊತೆಗೆ ಆತ್ಮೀಯತೆಯಿಂದ ಇರುವ ಅವರು ಬಿಜೆಪಿ ಸೇರುವುದು ಖಚಿತ ಹೌದು ಎಂಬೆಲ್ಲಾ ಮಾತುಗಳು ಪ್ರಭಾವಿ ಮುಖಂಡರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ನಾಯಕರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದು ಕಡೆಯ ಚುನಾವಣೆ ಎಂಬ ಮಾತುಗಳು ಈಗಾಗಲೇ ಹೇಳಿರುವುದರಿಂದ ಕಾಂಗ್ರೆಸ್ ಪ್ರಭಾವಿ ಮುಖಂಡರು ಬಿಜೆಪಿ ಸೇರಬಹುದು. ಅಷ್ಟೇ ಅಲ್ಲದೆ ಬಿಜೆಪಿ ಮಾಜಿ ಮುಖ್ಯಮಂತ್ರಿಗಳು ಇವರಿಗೆ ಅತ್ಯಂತ ಆಪ್ತರು ಸಹ ಹೌದು. ಹಾಗೆಯೇ ಯಾವ ಬಿಜೆಪಿ ಮುಖಂಡರ ಜೊತೆಗೂ ರಾಜಕೀಯ ವೈರತ್ವ ಬೆಳೆಸಿಕೊಳ್ಳದ ಕಾಂಗ್ರೆಸ್ ಪ್ರಭಾವಿ ಮುಖಂಡರು ಬಿಜೆಪಿ ಸೇರ್ತಾರ? ಎಂಬ ಪ್ರೆಶ್ನೆ ಎಲ್ಲರಲ್ಲೂ ಮೂಡಿದೆ.

ಹಾಗೇನಾದರೂ ಪ್ರಭಾವಿ ಮುಖಂಡರು ಬಿಜೆಪಿ ಸೇರಿದ್ದೇ ಆದಲ್ಲಿ ಅವರ ನೂರಾರು ಅಭಿಮಾನಿಗಳು, ಆಪ್ತ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಬರ್ತಾರಾ? ಎಂಬ ಪ್ರೆಶ್ನೆ ಕೂಡ ಇದೆ. ಒಟ್ಟಿನಲ್ಲಿ ಕಳೆದ ಹದಿನೈದು ದಿನಗಳಿಂದ ಈ ವಿಚಾರ ಪಟ್ಟಣದಲ್ಲಿ ಭಾರಿ ಚರ್ಚೆ ಆಗುತ್ತಿದ್ದು ಏನಾಗುತ್ತದೆ ಕಾದು ನೋಡಬೇಕಿದೆ.




Previous Post Next Post