"ಸೆಪಕ್ ಟಕ್ರಾ" ಪಂದ್ಯಾವಳಿಯಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿರುವ ತೀರ್ಥಹಳ್ಳಿಯ ನಿಹಾರಿಕಾ TTH

 "ಸೆಪಕ್ ಟಕ್ರಾ" ಪಂದ್ಯಾವಳಿಯಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿರುವ ತೀರ್ಥಹಳ್ಳಿಯ ನಿಹಾರಿಕಾ 


ತೀರ್ಥಹಳ್ಳಿ : ತೆಲಂಗಾಣದಲ್ಲಿ ನಡೆಯುತ್ತಿರುವ 34 ನೇ ವರ್ಷದ "ಸೆಪಕ್ ಟಕ್ರಾ" (ಕಿಕ್ ವಾಲಿಬಾಲ್)  ಪಂದ್ಯಾವಳಿಗೆ ತೀರ್ಥಹಳ್ಳಿಯ ನಿಹಾರಿಕಾ ಅವರು ಆಯ್ಕೆಯಾಗಿದ್ದು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪಂದ್ಯಾವಳಿ ಜ. 10 ರಿಂದ 14 ರವರೆಗೆ ನಡೆಯಲಿದೆ.

ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜಟ್ಟಿನಕೊಪ್ಪದ ನಿವಾಸಿ  ದೇವರಾಜ್ ಹಾಗೂ ಶಾಂತ ದಂಪತಿಗಳ ಪುತ್ರಿಯಾಗಿರುವ ನಿಹಾರಿಕಾ ಈಗ MSC ಪದವಿ ಮಾಡುತ್ತಿದ್ದಾರೆ. 

ಉತ್ತರ ಪ್ರದೇಶ, ಪಂಜಾಬ್, ಕೇರಳದಲ್ಲಿ ನಡೆದ "ಸೆಪಕ್ ಟಕ್ರಾ" ಪಂದ್ಯಾವಳಿಯಲ್ಲಿ ಕುವೆಂಪು ಯೂನಿವರ್ಸಿಟಿಯನ್ನು ಪ್ರತಿನಿಧಿಸಿದ್ದು ಅಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ನಡೆದ ಟೇಬಲ್ ಟೆನಿಸ್ ನಲ್ಲೂ ಭಾಗಿಯಾಗಿದ್ದರು. ಈಗ ತೆಲಂಗಾಣದಲ್ಲಿ ನಡೆಯುತ್ತಿರುವ "ಸೆಪಕ್ ಟಕ್ರಾ" ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿಹಾರಿಕಾ ಅವರು ವಿಜಯಶಾಲಿಯಾಗಿ ತೀರ್ಥಹಳ್ಳಿಗೆ ಹೆಮ್ಮೆ ತರಲಿ ಎಂದು ಶಿವಮೊಗ್ಗ ಸುದ್ದಿ ತಂಡ ಹಾರೈಸುತ್ತದೆ.







Previous Post Next Post