ಕಾರ್ಮಿಕ ಕಚೇರಿಯಲ್ಲಿ ಟೈಲ್ಸ್ ಅರ್ಜಿ ಸಲ್ಲಿಸಲು ಅವಕಾಶ
ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಟೈಲ್ಸ್ ವೃತ್ತಿಯನ್ನು ಮಾಡಿಕೊಂಡಿರುವ ನೋಂದಾಯಿತ ಫಲಾನುಭವಿಗಳಿಗೆ ಟೈಲ್ಸ್ ಲೇಯರ್ ಟೂಲ್ ಕಿಟ್‌ಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖೆಲೆಗಳು
ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಜೆರಾಕ್ಸ್ ಪ್ರತಿ ( ಗುರುತಿನ ಚೀಟಿಯು ಚಾಲ್ತಿಯಲ್ಲಿರಬೇಕು )
ಕಾರ್ಮಿಕರ ಆಧಾರ್ ಜೆರಾಕ್ಸ್ ಪ್ರತಿ.
ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಲ್ಲಿ ವೃತ್ತಿಯ ಸ್ವರೂಪ ಟೈಲ್ಸ್ ಲೇಯ ಎಂದು ಕಡ್ಡಾಯವಾಗಿ ನಮೂದಾಗಿರಬೇಕು.
(ಫಲಾನುಭವಿಗಳು ನೂತನ ಕಛೇರಿ ಗ್ರಾಮೀಣಾಭಿವೃದ್ಧಿ ಭವನ ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದು)
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 03-01-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-01-2024
