ತೀರ್ಥಹಳ್ಳಿಯ ಗುತ್ತಿಗೆದಾರರಿಂದ ದಯಾಮರಣಕ್ಕೆ ಮನವಿ
ತೀರ್ಥಹಳ್ಳಿ : ತಾಲೂಕಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ನಾವುಗಳು ಹಿಂದಿನ ವರ್ಷಗಳಲ್ಲಿ ಹಲವಾರು ಸರ್ಕಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು ಅವುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಿರುತ್ತದೆ. ಆದರೆ ಕಾಮಗಾರಿ ಪೂರ್ಣಗೊಂಡು ಎರಡು - ಮೂರು ವರ್ಷ ಕಳೆದರೂ ಇದುವರೆಗೂ ಹಣ ಪಾವತಿ ಆಗಿಲ್ಲ.
ಹಲವು ಬಾರಿ ಮನವಿ ಸಲ್ಲಿಸಿದರು, ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಆರ್ಥಿಕ ಸಮಸ್ಯೆಯಿಂದ ಬದುಕು ದುರ್ಬರವಾಗಿದ್ದು ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಇನ್ನೂ ಸಹ ಕಾಮಗಾರಿ ವೆಚ್ಚದ ಹಣ ಬಾರದೇ ಇದ್ದಲ್ಲಿ ತಮಗೆ ದಯಾಮರಣ ಕಲ್ಪಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗೆ ತೀರ್ಥಹಳ್ಳಿಯ ಗುತ್ತಿಗೆದಾರರು ಪತ್ರ ಬರೆದಿದ್ದಾರೆ.
%20(4)%20(10)%20(1).jpg)