ನಾ ಡಿಸೋಜರವರ ಸಾವು ಸಾಹಿತ್ಯ ಕ್ಷೇತ್ರಕ್ಕೆ ಆದ ಬಹಳ ದೊಡ್ಡ ನಷ್ಟ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ನಾಡಿನ ಹೆಸರಾಂತ ಸಾಹಿತಿ ನಮ್ಮ ಜಿಲ್ಲೆವರೇ ಆದ ನಾ ಡಿಸೋಜರವರ ಸಾವು ಸಾಹಿತ್ಯ ಕ್ಷೇತ್ರಕ್ಕೆ ಆದ ಬಹಳ ದೊಡ್ಡ ನಷ್ಟ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಡಿಸೋಜರವರು ವರಾಹಿ ಪ್ರಾಜೆಕ್ಟ್ ಸಮಯದಲ್ಲಿ ಅಲ್ಲಿ ನೌಕರರರಾಗಿ ಮುಳುಗಡೆಯ ಜನರ ಬದುಕಿನ ಸಂಪೂರ್ಣ ಅರಿವನ್ನು ಹೊಂದಿದ್ದರು. ಅವರ ಕಾದಂಬರಿಗಳಲ್ಲಿ ಸಂತ್ರಸ್ಥರ ಬದುಕನ್ನು ಬಿಂಬಿಸಿದ ರೀತಿ ನೋಡಿದಾಗ ಅವರಷ್ಟು ಉತ್ತಮವಾಗಿ ಚಿತ್ರಿಸಲು ಅವರಿಗೆ ಮಾತ್ರ ಸಾಧ್ಯ ಎಂದೇನಿಸಿತ್ತು. ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವ ಆಗಿದ್ದರು ಸರಳ ಸಹಜ ಬದುಕಿನ ಜೊತೆಗೆ ಜಾತಿ ಧರ್ಮಗಳನ್ನು ಮೀರಿ ಎಲ್ಲ ಧರ್ಮ ಸಿದ್ಧಾಂತಗಳನ್ನು ಗೌರವಿಸುವ ನಿಲುವನ್ನು ಡಿಸೋಜರವರ ಸಾಹಿತ್ಯದಲ್ಲೂ ನಾವು ನೋಡಬಹುದಾಗಿದೆ ಎಂದಿದ್ದಾರೆ.
ಮುಳುಗಡೆ ಜನರ ಬದುಕನ್ನು ಅನಾವರಣ ಗೊಳಿಸಿದ ಅವರ ಕಾದಂಬರಿ "ದ್ವೀಪ " ಸಿನಿಮಾವಾಗಿ ರಾಷ್ಟ್ರ ಪ್ರಶಸ್ತಿವರೆಗೂ ತಲುಪಿದ್ದು, ಜಗತ್ತಿಗೆ ಮುಳುಗಡೆ ಜನರ ಬದುಕನ್ನು ಪರಿಚಯಿಸಲು ಕಾರಣವಾಗಿದ್ದು ಡಿಸೋಜರವರ ಹಿರಿಮೆಗಳಲ್ಲಿ ಒಂದು ಎಂದು ಶಾಸಕರು ನಮನವನ್ನು ಸಲ್ಲಿಸಿದ್ದಾರೆ.
.
