ಮನೆಯಲ್ಲಿ ಯಾರು ಇಲ್ಲದಾಗ ಕಳವು - ಏನೆಲ್ಲಾ ವಸ್ತು ಕಳವು! Thift

 ಮನೆಯಲ್ಲಿ ಯಾರು ಇಲ್ಲದಾಗ ಕಳವು - ಏನೆಲ್ಲಾ ವಸ್ತು ಕಳವು!



ತೀರ್ಥಹಳ್ಳಿ : ಮನೆಯಲ್ಲಿ ಯಾರೂ ಇಲ್ಲದಾಗ ಚಿನ್ನಾಭರಣ, 200 ರೂ. ನಗದು ಕಳ್ಳತನ ಮಾಡಲಾಗಿದೆ. ಆಗುಂಬೆ ಸಮೀಪದ ಮೇಗರವಳ್ಳಿಯ ಬಾವಿಕೇರಿಯ ಭಾರತಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.


ಭಾರತಿ ಅವರು ಸ್ವಸಹಾಯ ಸಂಘದ ಮೀಟಿಂಗ್‌ಗೆ ತೆರಳಿದ್ದರು. ಕಾಲೇಜಿಗೆ ತೆರಳಿದ್ದ ಮಗಳು ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೆ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮನೆಯಲ್ಲಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌, 6 ಗ್ರಾಂ ತೂಕದ ಚಿನ್ನದ ಕವಿಯೋಲೆ, 200 ರೂ. ನಗದು ಕಳ್ಳನತವಾಗಿತ್ತು ಎಂದು ಆರೋಪಿಸಲಾಗಿದೆ.


ಭಾರತಿಯವರು ಮನೆ ಮುಂದಿನ ಬ್ರಷ್‌ ಡಬ್ಬಿಯಲ್ಲಿ ಇಡುತ್ತಿದ್ದರು. ಮನೆಯಲ್ಲಿ ಯಾರು ಇರುವುದಿಲ್ಲ ಮತ್ತು ಕೀ ಇಡುವ ಜಾಗ ಗೊತ್ತಿರುವವರೆ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous Post Next Post