ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆkite

ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆ 

ಗಾಳಿಪಟ ಸ್ಪರ್ಧೆ ಹೇಗಿರುತ್ತೆ? ಯಾರೆಲ್ಲಾ ಭಾಗವಹಿಸಬಹುದು?


ತೀರ್ಥಹಳ್ಳಿ : ಮಕರ ಸಂಕ್ರಾಂತಿ ಎಂದರೆ ಬರೀ ಎಳ್ಳು ಬೆಲ್ಲ ಹಂಚಿ ತಿನ್ನುವುದಲ್ಲ. ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುವುದು ಸಹ ಇದರಲ್ಲಿ ಒಂದು. ಅದರಲ್ಲೂ ಈ ಹಬ್ಬದಲ್ಲಿ ವಿಶೇಷವಾಗಿ ಗಾಳಿಪಟ ಹಾರಿಸಿ ಸಂಭ್ರಮಿಸುವುದು ಒಂದು ರೂಡಿ. ಇದಕ್ಕೆ ಸಂಬಂಧ ಪಟ್ಟಂತೆ ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಗಾಳಿಪಟ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿದೆ.

ಹೌದು ಮಲೆನಾಡ ಮಹಿಳಾ ಟ್ರಸ್ಟ್ ( ರಿ ) ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಹಾಗೂ ಜೆಸಿಐ ಇವರ ಸಹಭಾಗಿತ್ವದಲ್ಲಿ ದಿನಾಂಕ 14.01.2025ರ ಮಂಗಳವಾರ ಸಂಜೆ 3 ಗಂಟೆಗೆ ಪಟ್ಟಣದ ತುಂಗಾ ತೀರದಲ್ಲಿ ಗಾಳಿಪಟ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಗಾಳಿಪಟ ಸ್ಪರ್ಧೆಗೆ  15 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.

ಗಾಳಿಪಟವನ್ನು ಸ್ಪರ್ಧಿಗಳೇ ತರತಕ್ಕದ್ದು. ಅತ್ಯಂತ ಚಂದವಿರುವಂತಹ ಗಾಳಿಪಟಕ್ಕೆ ಹಾಗೂ ಅತ್ಯಂತ ಎತ್ತರಕ್ಕೆ ಹಾರುವ ಗಾಳಿಪಟಕ್ಕೆ ಬಹುಮಾನ ಇರಲಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ. 

ಸಂಪರ್ಕಿಸಿ : 8073170053, 7349302549


Previous Post Next Post