ಬಾಳೆಬೈಲಿನ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನ ಜೀರ್ಣೋದ್ದಾರ ಆಗುತ್ತಾ!? Siddeshvara gudda

 ಬಾಳೆಬೈಲಿನ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನ ಜೀರ್ಣೋದ್ದಾರ ಆಗುತ್ತಾ!?

ಪ್ರವಾಸಿ ತಾಣ ಆಗುತ್ತಾ ಸಿದ್ದೇಶ್ವರ ಗುಡ್ಡ ? 


ತೀರ್ಥಹಳ್ಳಿ : ಬೆಟ್ಟದ ಮೇಲೆ ಪುರಾತನ ಕಾಲದಿಂದ ನೆಲೆಯಾಗಿ ನಿಂತಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವರ ಹಾಗೂ ದೇವಸ್ಥಾನದ ಜೀರ್ಣೋದ್ದಾರ ಮಾಡಬೇಕು ಎಂಬ ಸಾವಿರಾರು ಭಕ್ತರ ಕೋರಿಕೆ ಈಡೇರುವ ಸಾಧ್ಯತೆ ಹೆಚ್ಚಾಗಿದೆ.

ಹೌದು ತೀರ್ಥಹಳ್ಳಿ ಪಟ್ಟಣದ ಸಮೀಪದ ಬಾಳೆಬೈಲಿನ ಪಕ್ಕದ ಗುಡ್ಡ ಬೆಟ್ಟಗಳ ಮೇಲೆ ಪುರಾತನ ಕಾಲದಿಂದ ನೆಲೆಯಾಗಿ ನಿಂತು ಸಾವಿರಾರು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಬಂದಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಹಾಗೂ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸಮಯ ನಿಗದಿಯಾಗಿದೆ.

ಜ. 25 ರ ಶನಿವಾರ ಅಂದರೆ ನಾಳೆ ಬೆಳಗ್ಗೆ 9:30 ಕ್ಕೆ ಸಿದ್ದೇಶ್ವರ ಸಭಾಭವನದಲ್ಲಿ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಮಾರ ಗುರು ತಂತ್ರಿಗಳ ಮೂಲಕ ಆರೂಢ ಪ್ರೆಶ್ನೆಯನ್ನು ನಡಸಲಾಗುತ್ತಿದೆ. ಈಗಾಗಲೇ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಬೇಕೆಂದು ಶೃಂಗೇರಿ ಶಾರದಾ ಪೀಠದ ಮಹಾಗುರುಗಳು ಹಾಗೂ ಭೀಮನಕಟ್ಟೆ ಮಠದ ಗುರುಗಳು ಸಹ ತಿಳಿಸಿದ್ದರು. ಈಗ ಜೀರ್ಣೋದ್ದಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಬೆಟ್ಟದ ಮೇಲೆ ನೆಲೆಯಾಗಿ ನಿಂತ ಸಿದ್ದೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಹಾಗೂ ದೀಪೋತ್ಸವ ಸಮಯದಲ್ಲಿ ಅತ್ಯಂತ ವೈಭವದಿಂದ ಪೂಜೆ ನೆರವೇರಿಸಲಗುತ್ತಿತ್ತು. ಅದರಲ್ಲೂ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಬೆಟ್ಟದ ಮೇಲ್ಭಾಗದಲ್ಲೇ ಅನ್ನ ಪ್ರಸಾದ ಸ್ವೀಕರಿಸುತ್ತಿದ್ದರು. ಈಗ ಆರೂಢ ಪ್ರೆಶ್ನೆ ಯಲ್ಲಿ ಏನೆಲ್ಲಾ ಬರುತ್ತ? ಪೂಜೆ ಹೇಗಿರುತ್ತೆ? ದೇವಸ್ಥಾನದ ಪುನಃ ಪ್ರಾಣ ಪ್ರತಿಷ್ಠೆ ಯಾವಾಗ? ಎಂಬ ಪ್ರೆಶ್ನೆಗಳ ಜೊತೆಗೆ ಕುತೂಹಲ ಸಹ ಮೂಡಿದೆ.

ಇನ್ನು ಗುಡ್ಡದ ಮೇಲ್ಭಾಗಕ್ಕೆ ಹೋಗುವ ಸಲುವಾಗಿ ಬೇರೆ ವ್ಯವಸ್ಥೆ ಏನಾದರು ಮಾಡುವ ಬಗ್ಗೆ ತೀರ್ಥಹಳ್ಳಿಯ ರಾಜಕೀಯ ಮುಖಂಡರು ಗಮನವಹಿಸಬೇಕಿದೆ. ಬರಿ ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವರ ಹೆಸರು ಹೇಳುವುದನ್ನು ಬಿಟ್ಟು ಚುನಾವಣೆ ನಂತರ ಸಹ ದೇವರ ಬಗ್ಗೆ ಭಕ್ತಿ ಇಟ್ಟುಕೊಂಡು ಕೆಲಸ ಮಾಡಿದರೆ ಅದಕ್ಕೊಂದು ಅರ್ಥ ಇರಲಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

Previous Post Next Post