ಉಸಿರಾಟದ ಸಮಸ್ಯೆಗೆ ಬೇಸತ್ತು ಸಾವಿಗೆ ಶರಣಾದ ಯುವತಿ! Shivamogga

ಉಸಿರಾಟದ ಸಮಸ್ಯೆಗೆ ಬೇಸತ್ತು ಸಾವಿಗೆ ಶರಣಾದ ಯುವತಿ!


ಶಿವಮೊಗ್ಗ : ಬದುಕಿ ಬಾಳಬೇಕಿದ್ದ 25 ವರುಷದ ಯುವತಿಯ ಜೀವನ ಉಸಿರಾಟದ ಸಮಸ್ಯೆಯಿಂದ ಕೊನೆಯಾದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 

ನೇತಾಜಿ ಸರ್ಕಲ್‌ ಬಳಿ ದೈವಜ್ಞ ಬ್ರಾಹ್ಮಣರ ಕುಟುಂಬದ ದಂಪತಿಗೆ ಸೌಮ್ಯ ಎಂಬ ಮಗಳಿದ್ದು, ಆಕೆ ಮಾಚೇನಹಳ್ಳಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ವರ್ಕ್‌ ಫ್ರಾಮ್‌ ಹೋಮ್‌ ಮಾಡುತ್ತಿದ್ದ ಆಕೆಗೆ ಉಸಿರಾಟದ ಸಮಸ್ಯೆಯು ಕಾಡುತ್ತಿತ್ತು ಎಂದು ಮನೆಯವರು ಹೇಳುತ್ತಾರೆ. 


ಈ ಕಾರಣಕ್ಕೆ ಸೌಮ್ಯಳಿಗೆ ಹಲವು ಬಾರಿ ಚಿಕಿತ್ಸೆ ಸಹ ನೀಡಲಾಗಿತ್ತು. ಈ ನಡುವೆ ಸೌಮ್ಯ ಇದ್ದಕ್ಕಿದ್ದಂತೆ ಮನೆ ಬೆಡ್‌ರೂಂನಲ್ಲಿನ ಸ್ಟೀಲ್‌ ಫೋಲ್ಸ್‌ಗೆ ಸೀರೆ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ.  ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಯುಡಿಆರ್‌ ದಾಖಲಿಸಿಕೊಂಡಿದ್ದಾರೆ.

Previous Post Next Post