ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ತೀರ್ಥಹಳ್ಳಿಗೆ ಪ್ರಥಮ ಸ್ಥಾನ ಪಡೆದ ಪ್ರಾಂಜಲಿ.ಆರ್.ಹೆಬ್ಬಾರ್ Dance

ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ತೀರ್ಥಹಳ್ಳಿಗೆ ಪ್ರಥಮ ಸ್ಥಾನ ಪಡೆದ ಪ್ರಾಂಜಲಿ.ಆರ್.ಹೆಬ್ಬಾರ್



ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇದರ ಅಡಿಯಲ್ಲಿ ನಡೆಯುವ ಜೂನಿಯರ್ ಹಂತದ ಭರತನಾಟ್ಯ ಪರೀಕ್ಷೆಯಲ್ಲಿ ತೀರ್ಥಹಳ್ಳಿಯ ಸುಮುಖ ಸಂಗೀತ ಮತ್ತು ನೃತ್ಯ ಶಾಲೆಯ ನೃತ್ಯ ತರಬೇತುದಾರರಾದ  ಶ್ರೀಲತಾ ಪ್ರೀತಮ್ ಗಂಧರ್ವ ಇವರ ಮಾರ್ಗದರ್ಶನದಲ್ಲಿ ಕಲಿಯುತ್ತಿರುವ ಕುಮಾರಿ ಪ್ರಾಂಜಲಿ.ಆರ್.ಹೆಬ್ಬಾರ್ 93.5% (374) ಅಂಕಗಳನ್ನು ಪಡೆದು  ತಾಲ್ಲೂಕಿಗೆ ಹೆಮ್ಮೆ ತಂದಿರುತ್ತಾಳೆ.


ಇವಳು ಕೆ. ಸಿ ರಸ್ತೆಯ ರಾಘವೇಂದ್ರ ಮತ್ತು ಶ್ರುತಿ ದಂಪತಿಗಳ ಪುತ್ರಿಯಾಗಿದ್ದು ಸೇವಾಭಾರತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

Previous Post Next Post