ಫೆ. 2 ಕ್ಕೆ ಕಲ್ಲಾರೆ ಗಣಪತಿ ದೇವಸ್ಥಾನದ ರಥೋತ್ಸವ rathotsava

ಫೆ. 2 ಕ್ಕೆ ಕಲ್ಲಾರೆ ಗಣಪತಿ ದೇವಸ್ಥಾನದ ರಥೋತ್ಸವ 


ತೀರ್ಥಹಳ್ಳಿ : ಪಟ್ಟಣದ ಹೃದಯ ಭಾಗದಲ್ಲಿರುವ ಕಲ್ಲು ಬಂಡೆಯ ಮೇಲೆ ಪ್ರತಿಷ್ಠಾಪಿಸಲ್ಪಟ್ಟಿದ್ದ ಕಲ್ಲಾರೆ ಗಣಪತಿ ದೇವರ ವರ್ಧಂತ್ಯೋತ್ಸವ ಕಾರ್ಯಕ್ರಮವು ಮೂರು ದಿನಗಳ ಪರ್ಯಂತ ಪ್ರಧಾನ ಅರ್ಚಕರಾದ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ.


ಕಾರ್ಯಕ್ರಮ ಏನೇನು ?

ಜ. 31 ರ ಶುಕ್ರವಾರದಂದು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ದ್ವಾದಶ ನಾರಿಕೇಳ ಗಣಯಾಗ, ಸಹಸ್ರಾವರ್ತನ ಅಥರ್ವಶೀರ್ಷಾಭಿಷೇಕ ಹಾಗೂ ಸಂಜೆ ರಂಗಪೂಜೆ ನಡೆಯಲಿದೆ.

ಫೆ. 1 ರ ಶನಿವಾರದಂದು ಬೆಳಗ್ಗೆ ಮಂಡಲ ರಚನೆ, ಪರಶುರಾಮ ತೀರ್ಥಪೂಜಾ ಪೂರ್ವಕ ಆಗ್ರೋದಕ ಆನಯನ, ಕಲಶ ಸ್ಥಾಪನೆ, ತತ್ವಾಧೀವಾಸಹೋಮ,  ಕಲಶಾಭಿಷೇಕ,  ಬ್ರಹ್ಮ ಕುಂಭಾಭಿಷೇಕ, ವಿಶೇಷ ಅಲಂಕಾರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ  ಹಾಗೂ ಸಂಜೆ 4:30 ಕ್ಕೆ ರಂಗಪೂಜೆ, ಮತ್ತು ಸಂಜೆ 5:30 ಕ್ಕೆ ಪುರೊತ್ಸವ ನೆಡೆಯಲಿದೆ.

ಫೆ. 2 ರ ಭಾನುವಾರದಂದು ಸಹಸ್ರಮೋದಕ ಗಣಪತಿ ಹೋಮ 12 ಕ್ಕೆ ಪೂರ್ಣಹುತಿ, ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ 6:30 ಕ್ಕೆ ಪ್ರದೋಷ ಕಾಲದಲ್ಲಿ ರಥೋತ್ಸವ ನೆಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಮಿತಿಯವರು ಕೋರಿದ್ದಾರೆ.

Previous Post Next Post