ಈ ಬಾರಿ ತೀರ್ಥಹಳ್ಳಿಯಲ್ಲಿ ಬಿ ಕಾಂ ಜಾತ್ರೆ - ಹಾಗಂದ್ರೆ ಏನು ಗೊತ್ತಾ? Teppotsava

 ಈ ಬಾರಿ ತೀರ್ಥಹಳ್ಳಿಯಲ್ಲಿ ಬಿ ಕಾಂ ಜಾತ್ರೆ - ಹಾಗಂದ್ರೆ ಏನು ಗೊತ್ತಾ?


ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಅತ್ಯಂತ ವೈಭವದಿಂದ ನಡೆಯಲಿದ್ದು 17 ಲಕ್ಷ ಬಜೆಟ್ ನಲ್ಲಿ ರಥೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ಬುಧವಾರ ಪಟ್ಟಣದ ಅನ್ನಪೂರ್ಣ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಸಹ ನಡೆಯಲಿದೆ. ತೀರ್ಥಸ್ನಾನದ ಸಂಜೆ ಶಮಿತಾ ಮಲ್ನಾಡ್ ಅವರ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಹಾಗೂ ಉದಯ್ ಶೆಟ್ಟಿ ಅವರ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ನಡೆಯಲಿದೆ ಎಂದು ತಿಳಿಸಿದರು.

ಬಿ ಕಾಂ ಜಾತ್ರೆ  ವಿಶೇಷ ಏನು?

ಈ ಬಾರಿ ತೆಪ್ಪೋತ್ಸವ ಸಮಿತಿ ಬಿ ಕಾಂ ಸಮಿತಿ ಆಗಿದೆ ಎಂದು ಮತ್ತೊರ್ವ ಸಂಚಾಲಕ ಡಾ. ಸುಂದರೇಶ್ ಹೇಳಿದರು. ಬಿ ಅಂದರೆ ಬಿಜೆಪಿ ಹಾಗೂ ಕಾಂ ಎಂದರೆ ಕಾಂಗ್ರೆಸ್ ಎರಡು ಪಕ್ಷಗಳು ಒಟ್ಟಿಗೆ ಈ ಬಾರಿ ಜಾತ್ರೆಯನ್ನು ಮಾಡುತ್ತಿದೆ. ಈ ಬಾರಿ ಕಳೆದ ಬಾರಿಗಿಂತ ಅತ್ಯಂತ ವೈಭವದಿಂದ ಜಾತ್ರೆ ನಡೆಯಲಿದೆ. ಜಾತ್ರೆಯ ಅಧ್ಯಕ್ಷರು ಶಾಸಕ ಆರಗ ಜ್ಞಾನೇಂದ್ರ, ಉಪಾಧ್ಯಕ್ಷರಾಗಿ ಕಿಮ್ಮನೆ ರತ್ನಾಕರ್ ಹಾಗೂ ಆರ್ ಎಂ ಮಂಜುನಾಥ್ ಗೌಡರು ಇರಲಿದ್ದಾರೆ. ತಹಸೀಲ್ದಾರ್ ಜಾತ್ರೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಡಿ. 28 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು ಡಿ. 30 ರಂದು ತೀರ್ಥಸ್ನಾನ, ಡಿ. 31 ರಂದು ಬ್ರಹ್ಮ ರಥೋತ್ಸವ, ಜ. 1 ರಂದು ಅದ್ದೂರಿ ತೆಪ್ಪೋತ್ಸವ ನಡೆಯಲಿದೆ ಎಂದರು.







Previous Post Next Post