ಶ್ರೀ ರಾಮೇಶ್ವರ ದೇವಸ್ಥಾನದ ಹೊರೆ ಕಾಣಿಕೆಗಾಗಿ ನಾಳೆ ಹೋಗುವ ಮಾರ್ಗಗಳು ಯಾವುದು!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಹದಿನೈದು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮೂರು ದಿನಗಳ ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಈಗಾಗಲೇ ಸಂಚಾರ ಆರಂಭಿಸಿದೆ
ನಾಳೆ (22-12-24) ರಂದು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ, ನಾಡತಿ, ಸೀಬಿನಕೆರೆ, ದೊಡ್ಡಮನೆಕೇರಿ, ಕೋಳಿಕಾಲುಗುಡ್ಡ, ಸೊಪ್ಪುಗುಡ್ಡೆ, ನಾಡತಿ, KC ರಸ್ತೆ, ಹಿಂದೂ ರುದ್ರಭೂಮಿ ರಸ್ತೆ, ಕುಶಾವತಿ, ಶಂಕರಗುಡ್ಡ, ಹೈ ಸ್ಕೂಲ್ ರಸ್ತೆ, ಹಾಗು ಪಟ್ಟಣದ ಎಲ್ಲಾ ಮುಖ್ಯರಸ್ತೆಗಳಲ್ಲಿ ಸಂಚರಿಸುವುದರ ಜೊತೆಗೆ ಚಿಬ್ಬಲಗುಡ್ಡೆ, ಗೋಪಾಲಪುರ, ಮೇಳಿಗೆ, ಕೆಳಕೆರೆ, ಕೋದೂರು, ಸುಳುಗೋಡು, ಕಾಳಗಾರು, ಬುಕ್ಲಾಪುರ, ಹೊರಬೈಲು, ಗಡಿಕಲ್ಲು, ಕುಪ್ಪಳ್ಳಿ, ಕಲ್ಲುಕೊಡಿಗೆ, ಗುರುವಳ್ಳಿ, ಹೊಳೆಕೊಪ್ಪ, ಕೊಳವಾರ, ತೋರಳಿ, ಶುಂಠಿಕಟ್ಟೆ, ಬಸವಾನಿ, ಮಳೂರು, ಅಮ್ಮ್ತಿ, ಅಂದಗೆರೆ, ತುಂಬೆಕೋಡಿಗೆ, ದೇವಂಗಿ, ಜಟ್ಟಿನಮಕ್ಕಿ, ಹಿಲಿಕೆರೆ, ಹೊಸತೋಟ, ಬಾಣಾಂಕಿ, ಬಳಗಟ್ಟೆ, ತಳುವೆ, ತೀರಳೆಬೈಲು, ಮಧುಗೆರೆ, ಕಡಿದಾಳು, ಹೊಳೆಗದ್ದೆ, ಹಾರೋಗೋಳಿಗೆ, ಹರಳಿಮಠ, ಗುಡ್ಡೆಕೊಪ್ಪ, ಬಾಲನಕೊಡಿಗೆ, ಹುಲಿಗುದ್ದು, ಹೊನ್ನಾನಿ, ಹೊಸಕೊಪ್ಪ, ಕಮಕಾರು, ಕೊಕ್ಕೋಡ್ತಿ, ಮುನ್ನೂರು, ಕೋಮನೆ, ಅಲಬಳ್ಳಿ, ಹುಣಸವಳ್ಳಿ, ಕಲ್ಯಾಣಿ ಅಗ್ರಹಾರ, ಬಿಳಿಗೆರೆ, ವಿಠಲನಗರ (ಡಿಪ್ಪೋ), ಗೆರಸ, ಬಿಲಗ, ಹೆಗ್ಗೆಬೈಲು ಭಾಗಗಳಿಗೆ ಹೊರೆಕಾಣಿಕೆ ವಾಹನ ಬರಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ ಸಮಿತಿಯವರು ವಿನಂತಿಸಿದ್ದಾರೆ.
