ಖಾಸಗಿ ಲೇಔಟ್‌ನ ಘನತ್ಯಾಜ್ಯ: ಸಾರ್ವಜನಿಕರಿಗೆ ತೊಂದರೆ : ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ.....!
ತೀರ್ಥಹಳ್ಳಿ: ಹೊದಲ-ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿತ್ತಿನಗದ್ದೆ ಚಿಟ್ಟೇಬೈಲು ಮಧ್ಯದಲ್ಲಿ ಸಾಂಬಾ ಸದಾಶಿವ ದೇವಸ್ಥಾನದ ಪಕ್ಕ ಪ್ರಜ್ಞಾ ಭಾರತಿ ಶಾಲೆಯ ಎದುರು ಖಾಸಗಿ ಲೇಔಟ್ ನಿರ್ಮಿಸುತ್ತಿದ್ದು ಈ ಖಾಸಗಿ ಲೇಔಟ್‌ನ್ನು ಜೆಸಿಬಿಯಿಂದ ಸಮತಟ್ಟು ಮಾಡುವ ಸಂದರ್ಭದಲ್ಲಿ ಮರದ ಮುಂಡು, ಮಣ್ಣು, ಕಸಕಡ್ಡಿ ಇನ್ನಿತರ ಅನುಪಯುಕ್ತ ವಸ್ತುಗಳನ್ನು ಟ್ರ್ಯಾಕ್ಟರ್ ಮೂಲಕ ತಂದು ಚಿಟ್ಟೇಬೈಲು ಸಮೀಪ ಕ್ರಿಕೆಟ್ ಮೈದಾನದ ಪಕ್ಕದಲ್ಲಿ ಹಾಕುತ್ತಿದ್ದು ಇದರಿಂದ ಅಕ್ಕಪಕ್ಕದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಕಸ ಹಾಕಿದ ಜಾಗವು ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಮಾಹಿತಿಯೂ ಕೂಡ ಲಭ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಿ ರಾಶಿ ರಾಶಿ ಘನತ್ಯಾಜ್ಯವನ್ನು ಹಾಕುತ್ತಿರುವುದನ್ನು ತಡೆಯುವಂತೆ ಹಾಗೂ ಸೂಕ್ತ ಕ್ರಮ ಜರುಗಿಸುವಂತೆ ಚಿಟ್ಟೇಬೈಲು ಅಕ್ಕಪಕ್ಕದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ