ನಯನಾ ಜೆ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ!
ತೀರ್ಥಹಳ್ಳಿ: ಮಾಜಿ ಪಟ್ಟಣ ಪಂಚಾಯತ್ ಸದಸ್ಯರು, ಮಹಿಳಾ ವೇದಿಕೆ ಅಧ್ಯಕ್ಷರು ಆದ ನಯನಾ ಶೆಟ್ಟಿ ಅವರಿಗೆ ರಾಷ್ಟ್ರ ಮಟ್ಟದ ಗ್ಲೋಬಲ್ ವುಮನ್ ಇನ್ಸ್ಪಿರೇಶನ್ ಅವಾರ್ಡ್ 2024 ಲಭಿಸಿದೆ.
ತೀರ್ಥಹಳ್ಳಿಯ ಪ್ರಸಿದ್ಧ ವಸ್ತ್ರ ಮಳಿಗೆಗಳಲ್ಲಿ ಒಂದಾದ ಸಹನಾ ಫ್ಯಾಶನ್ ಸಿಲ್ಕ್ ಮಾಲಕಿ ಹಾಗೂ ಸಂಘಟಕಿ ನಯನಾ ಜೆ ಶೆಟ್ಟಿ ಅವರು ಅ.17ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತೀರ್ಥಹಳ್ಳಿ ಮಾತ್ರವಲ್ಲದೆ ಮಲೆನಾಡಿನಲ್ಲಿ ಮಹಿಳೆಯರ ಸಂಘಟನೆ ಮಾಡುವ ಜೊತೆಗೆ ಮಹಿಳೆಯರ ಕಷ್ಟ ಸುಖಗಳಿಗೆ ಸ್ಪಂದಿಸುವ ನಯನ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ.
ನೂರಾರು ಮಹಿಳೆಯರಿಗೆ ವೇದಿಕೆ ನೀಡಿದ್ದಾರೆ.
ಸಾಧಕ ಮಹಿಳೆಯರಿಗೆ ಸನ್ಮಾನಿಸಿದ್ದಾರೆ. ಜೊತೆಗೆ ಮಹಿಳಾ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಟಾಪ್ ಹಂಡ್ರೆಡ್ ಇನ್ಸ್ಪಿರೇಷನ್ ವಮೆನ್ಸ್ ಆಫ್ 2024 ಅವಾರ್ಡ್ ನೀಡಲಾಗಿದೆ.
Tags:
ತೀರ್ಥಹಳ್ಳಿ ಸುದ್ದಿ