ಜನಸ್ನೇಹಿ ಆಡಳಿತ ಕೊಡುವೆ - ರಹಮತುಲ್ಲಾ ಅಸಾದಿ muncipal

ಜನಸ್ನೇಹಿ ಆಡಳಿತ ಕೊಡುವೆ - ರಹಮತುಲ್ಲಾ ಅಸಾದಿ 
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ನ ಅಧ್ಯಕ್ಷರು - ಉಪಾಧ್ಯಕ್ಷರ ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ.
ಮುಖಂಡರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್ ಎಂ ಮಂಜುನಾಥ್ ಗೌಡ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದಾರೆ. ಈ ನನ್ನ ಅವಧಿಯಲ್ಲಿ ಜನಸ್ನೇಹಿ ಆಡಳಿತ ಕೊಡುತ್ತೇನೆ ಎಂದು ನೂತನ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ತಿಳಿಸಿದರು 

ಶುಕ್ರವಾರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ಒಳ್ಳೆಯ ಅವಕಾಶ ಕೊಟ್ಟಿದೆ. ಈ ನನ್ನ ಅವಧಿಯಲ್ಲಿ ಪಟ್ಟಣವನ್ನು ಅಭಿವೃದ್ಧಿ ಮಾಡುವತ್ತ ಗಮನ ಹರಿಸುತ್ತೇನೆ. ಎಲ್ಲರ ಜೊತೆಗೆ ಸೌಹಾರ್ದಯುತವಾಗಿ ಕೆಲಸ ಮಾಡುತ್ತೇನೆ. ವಿರೋಧ ಪಕ್ಷದವರ ಜೊತೆಗೂ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತೇನೆ. ಅದರಲ್ಲೂ ಲಂಚ ರಹಿತ ಅಧಿಕಾರ ಮಾಡುತ್ತೇನೆ ಎಂದು ಪಣ ತೊಟ್ಟರು.

ಭಾವೈಖ್ಯತೆ ಮೆರೆದ ಅಸಾದಿ 

ಅಧ್ಯಕ್ಷರು ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಎಲ್ಲರಲ್ಲೂ ಸಂತಸ ತಂದಿತು. ಧರ್ಮದ ವಿಚಾರದಲ್ಲಿ ಕೆಲವು ಘಟನೆಗಳು ನಡೆಯುವ ಈ ಕಾಲದಲ್ಲಿ ವಿಶೇಷವಾಗಿ ಕವಲೇದುರ್ಗಾ ಮಠದ ಶಿವಯೋಗಿ ಸ್ವಾಮೀಜಿಗಳನ್ನು ಕರೆಸಿ ಆಶೀರ್ವಾದ ಪಡೆಯುವ ಮೂಲಕ ಭಾವೈಖ್ಯತೆ ಮೆರೆದರು.

ಅಧ್ಯಕ್ಷರ ಕೊಠಡಿಯಲ್ಲೂ ಭಾವೈಖ್ಯತೆ

ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿಧಿಗಳು ಚುನಾವಣೆ ನಂತರ ಬದಲಾವಣೆ ಆಗುವುದು ಸಹಜ, ಅದರಲ್ಲೂ ಅಧಿಕಾರದ ನಂತರ ದೇವರನ್ನು ಮರೆಯುವ ಕಾಲ ಕೂಡ ಹೌದು. ಆದರೆ ಅದೆಲ್ಲವನ್ನು ಬದಿಗಿಟ್ಟ ಅಸಾದಿ ತಮಗೆ ಆದರ್ಶವಾಗಿರುವ ನಾರಾಯಣ ಗುರುಗಳ ಫೋಟೋವನ್ನು ತಮ್ಮ ಕೊಠಡಿಯಲ್ಲಿ ಅನಾವರಣ ಮಾಡಿಸಿದರು. ಈ ವೇಳೆ ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋ ಸಹ ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಕವಲೇದುರ್ಗ ಸ್ವಾಮೀಜಿ, ಕಿಮ್ಮನೆ ರತ್ನಾಕರ್, ಪ ಪಂ ಮುಖ್ಯಧಿಕಾರಿ ನಾಗರಾಜ್, ಕೆಸ್ತೂರು ಮಂಜುನಾಥ್, ಪ. ಪಂ ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಮಂಜುಳಾ ನಾಗೇಂದ್ರ, ಶಬನಂ, ಬಿ. ಗಣಪತಿ, ಸೇರಿ ಹಲವರು ಉಪಸ್ಥಿತರಿದ್ದರು.





Previous Post Next Post