ಅಯೋಧ್ಯೆಯಿಂದ ರಾಮನ ಬದಲು ಗಣಪತಿ ಬಂದಿದ್ದು ಹೇಗೆ!? Ganeshotsava

ಅಯೋಧ್ಯೆಯಿಂದ ರಾಮನ ಬದಲು ಗಣಪತಿ ಬಂದಿದ್ದು ಹೇಗೆ!?

ತೀರ್ಥಹಳ್ಳಿಯಲ್ಲಿ ಕಣ್ಮನ ಸೆಳೆದ ಅಯೋಧ್ಯಾ ಗಣಪತಿ!
ತೀರ್ಥಹಳ್ಳಿ : ಗಣಪತಿ ಎಂದರೇನೇ ಅದೇನೋ ಎಲ್ಲರಿಗೂ ಪ್ರೀತಿ. ಅಂತಹದರಲ್ಲಿ ಗಣಪತಿ ಹಬ್ಬ ಎಂದರೆ ಕೇಳಬೇಕಾ, ಸಂಭ್ರಮಕ್ಕೆ ಪಾರವೇ ಇರಲ್ಲ. ವಿವಿಧ ರೀತಿಯಲ್ಲಿ ಗಣಪತಿ ಹಬ್ಬ ಆಚರಣೆ ಮಾಡುವುದು ಉಂಟು, ಚೆಂದದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಭಕ್ತಿ ಭಾವದಿಂದ ಪೂಜೆಯನ್ನು ಮಾಡಿ ಸೇವೆ ಸಲ್ಲಿಸುತ್ತಾರೆ.

ವಿವಿಧ ರೀತಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ಸಹಜ. ಆದರೆ ತೀರ್ಥಹಳ್ಳಿಯ ಛತ್ರಕೇರಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಅಯೋಧ್ಯಾ ಗಣಪ ಎಲ್ಲರ ಕಣ್ಮನ ಸೆಳೆಯುತ್ತಿದೆ. ದೇಶಾದ್ಯಂತ ಸದ್ದು ಮಾಡಿದ್ದ ಅಯೋಧ್ಯಾ ರಾಮಮಂದಿರದ ಚಿತ್ರಣವನ್ನೇ ಬಿಂಬಿಸುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಗೋಡೆಯಲ್ಲಿ ಅಯೋಧ್ಯೆಯ ಚಿತ್ರವನ್ನು ಬಿಡಿಸಿ, ರಾಮನ ಕಲ್ಲಿನ ಹಾಗೆಯೇ ಗಣಪನ ಮೂರ್ತಿಯನ್ನು ಕೆತ್ತನೆ ಮಾಡಿದ್ದು ರಾಮನ ಮುಖದ ಬದಲಾಗಿ ಗಣೇಶನ ಮುಖವನ್ನು ಇಟ್ಟಂತೆ ಕೆತ್ತಲಾಗಿದೆ. ಬಹಳ ವಿಶೇಷವಾಗಿ ಪ್ರಭಾವಳಿಯಲ್ಲಿ ದೇವತೆಗಳು, ಋಷಿಮುನಿಗಳನ್ನು ಒಳಗೊಂಡಿದ್ದು ಬ್ರಹ್ಮ ಕಮಲದ ಮೇಲೆ ನಿಂತಿರುವಂತೆ ಕೆತ್ತಲಾಗಿದೆ. ಈ ಸುಂದರವಾದ ಗಣಪನನ್ನು ನೋಡಲು ತೀರ್ಥಹಳ್ಳಿ ಜನರು ಆಗಮಿಸಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ.

ವಿಭಿನ್ನ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಣೆ ಮಾಡುವ ಛತ್ರಕೇರಿ ಸಮಿತಿ ಈ ಬಾರಿ ಅಯೋಧ್ಯೆಯ ರಾಮಮಂದಿರದ ಸನ್ನಿವೇಶವನ್ನು ಸೃಷ್ಟಿ ಮಾಡಿರುವುದು ವಿಶೇಷವಾಗಿದೆ. ಗಣೇಶನನ್ನು ನೋಡಲು ಬರುವ ಭಕ್ತರು ದೇವರ ಜೊತೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
ಇಲ್ಲಿಯವರೆಗೆ ಅಧಿಕಾರಿಗಳು ಮೆಚ್ಚಿದ ಗಣಪ ಈ ಬಾರಿ ಸಾರ್ವಜನಿಕರೇ ಮೆಚ್ಚುವ ಗಣಪ ಆಗುವುದರಲ್ಲಿ ಅನುಮಾನವಿಲ್ಲ.






Previous Post Next Post