ತೀರ್ಥಹಳ್ಳಿಯಲ್ಲಿ ಮನೆಯ ಹಂಚು ತೆಗೆದು ಒಳ ನುಗ್ಗಿ ಕಳ್ಳತನ..! Thift

ತೀರ್ಥಹಳ್ಳಿಯಲ್ಲಿ ಮನೆಯ ಹಂಚು ತೆಗೆದು ಒಳ ನುಗ್ಗಿ ಕಳ್ಳತನ..!

ತೀರ್ಥಹಳ್ಳಿ:  ಬೀಗ ಹಾಕಿದ್ದ ಮನೆಯೊಂದರ ಹಂಚು ತೆಗೆದು ಒಳನುಗ್ಗಿದ ಕಳ್ಳರು, ಸರಿ ಸುಮಾರು 59 ಸಾವಿರ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಕುಳ್ಳುಂಡೆ ಗ್ರಾಮದಲ್ಲಿ ನಡೆದಿದೆ..

ಗ್ರಾಮದ ಬೇಬಿ ಎಂಬುವವರು ಅನಾರೋಗ್ಯದ ಕಾರಣದಿಂದ ಮೇ 27ರಂದು ಸಾಗರದ ಕೊರಲಿಕೊಪ್ಪದಲ್ಲಿರುವ ತಮ್ಮ ಸಂಬಂಧಿಯ ಮನೆಗೆ ವಿಶ್ರಾಂತಿಗಾಗಿ ತೆರಳಿದ್ದರು. ಜೂನ್ 8ರಂದು ರಾತ್ರಿ ಕಳ್ಳತನದ ವಿಷಯ ತಿಳಿದು ಮನೆಗೆ ಬಂದು ನೋಡಿದಾಗ, ಮನೆಯ ಹಿಂಭಾಗದ ಸ್ನಾನದ ಗೃಹದ ಹಂಚುಗಳನ್ನು ತೆಗೆದು ಕಳ್ಳರು ಒಳನುಗ್ಗಿರುವುದು ಬೆಳಕಿಗೆ ಬಂದಿದೆ.

ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿ 2 ಚಿನ್ನದ ಉಂಗುರ, ತಲಾ 1 ಗ್ರಾಂ ತೂಕದ ಚಿನ್ನದ ಕಾಯಿನ್, ಪೆಂಡೆಂಟ್, ತಾಳಿ, ಕಿವಿಯೋಲೆ ಹಾಗೂ 10 ಗ್ರಾಂ ತೂಕದ ಬೆಳ್ಳಿಯ ಲಕ್ಷ್ಮಿ ವಿಗ್ರಹ ಹಾಗೂ 10 ಸಾವಿರ ಹಣವನ್ನು ಕಳವು ಮಾಡಲಾಗಿದೆ.   ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Previous Post Next Post