ಮುಂಗಾರು ಮಳೆಯ ಆಗಮನ ಹಿನ್ನಲೆ - ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ತಹಸೀಲ್ದಾರ್ ಸಭೆ Taluk Office

ಮುಂಗಾರು ಮಳೆಯ ಆಗಮನ ಹಿನ್ನಲೆ - ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳ ಜೊತೆ ತಹಸೀಲ್ದಾರ್ ಸಭೆ 

ತೀರ್ಥಹಳ್ಳಿ :  ಮುಂಗಾರು ಮಳೆಯ ಆಗಮನ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಲಾಯಿತು.

ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ  ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು. ಪ್ರವಾಹ ಹಾಗೂ ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳ ನಿರಂತರ ನಿಗಾವಹಿಸುವಂತೆ ತಿಳಿಸಿದರು. ತುರ್ತು ಪರಿಸ್ಥಿತಿಯಲ್ಲಿ ಕಂದಾಯ, ಪೊಲೀಸ್, ಅರಣ್ಯ, ಮೆಸ್ಕಾಂ, ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು..

ಇನ್ನು ಪ್ರತಿ ವರ್ಷದಂತೆ ಕಂಟ್ರೋಲ್ ರೂಂ ಹಾಗೂ ತುರ್ತು ಸಂಪರ್ಕ ವ್ಯವಸ್ಥೆ ಸಕ್ರಿಯಗೊಳಿಸುವುದರ ಬಗ್ಗೆ, 
ಗಾಳಿ ಮಳೆಯಿಂದ ಮರ ಬೀಳುವಿಕೆ ಹಾಗೂ ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ,  ದುರ್ಬಲ ಸೇತುವೆಗಳು, ರಸ್ತೆ ಹಾಗೂ ಅಪಾಯ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ 
ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವುದರ ಬಗ್ಗೆ ತಿಳಿಸಿದರು..

ಪ್ರತಿಯೊಬ್ಬ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರುತ್ತದೆ . ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಮುಂಗಾರು ಮಳೆಗಾಲದ ಅವಧಿಯನ್ನು ಯಶಸ್ವಿಯಾಗಿ ಎದುರಿಸಲು ಸಿದ್ಧರಾಗುವಂತೆ ತಹಸೀಲ್ದಾರ್ ರಂಜಿತ್ ಅಧಿಕಾರಿಗಳಿಗೆ ಸೂಚಿಸಿದರು..




Previous Post Next Post