ಮಹಿಷಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣ - ಒಂದು ಕೋಟಿ ರೂ ಮೌಲ್ಯದ ಮಾಲು ಹಾಗೂ ಆರೋಪಿ ಪೊಲೀಸ್ ವಶಕ್ಕೆ..!
ತೀರ್ಥಹಳ್ಳಿ : ತಾಲೂಕಿನ ಬಾಳಗಾರು ಸಮೀಪದ ಮಹಿಶಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕೇವಲ ಒಂದೇ ದಿನದಲ್ಲಿ ಪೊಲೀಸರು ಬೇಧಿಸಿದ್ದಾರೆ. ಒಂದು ಕೋಟಿ ಮೌಲ್ಯದ ಮಾಲಿನ ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ..
ಅಂದಾಜು ಮೌಲ್ಯ 01 ಕೋಟಿ 1 ಲಕ್ಷದ 40 ಸಾವಿರ ರೂ. ಗಳ 780 ಗ್ರಾಂ ತೂಕದ ಬಂಗಾರದ 16 ಹಲಗಾರತಿಗಳನ್ನು ಕಳವು ಮಾಡಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಶಿವಮೊಗ್ಗದ ಗಾಂಧಿನಗರದ 25 ವರ್ಷದ ರಾಘವೇಂದ್ರ ಆಚಾರ್ಯ ಬಿನ್ ವಿಜಯೇಂದ್ರ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ ಮಾಲು ವಶಕ್ಕೆ ಪಡೆದಿದ್ದಾರೆ..
ಪ್ರಕರಣವನ್ನು ಪತ್ತೆಹಚ್ಚಲು ನಿಖಿಲ್.ಬಿ ಪೊಲೀಸ್
ಅಧೀಕ್ಷಕರು, ಕಾರಿಯಪ್ಪ.ಎ.ಜಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಠಾಣಾ ಪಿ.ಐ. ಇಮ್ರಾನ್ ಬೇಗ್ ಹಾಗೂ ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್.ಎಲ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಪ್ರಕರಣ ಬೇಧಿಸಲಾಗಿದೆ.. ಈ ತಂಡದಲ್ಲಿ ಮಾಳೂರು ಪಿ.ಐ.ಎಸ್ ಸುನಿಲ್, ಸಿಬ್ಬಂದಿಗಳಾದ ಅಂಗೇಗೌಡ, ಸುರಕ್ಷಿತ್, ಶ ಕುಮಾರ್, ರವಿ. ಸುರೇಶ್ ನಾಯ್ಕ, ಸಂತೋಷ್, ವಿನಯ್ ಕುಮಾರ್ ಚಾಲಕರಾದ ಅವಿನಾಶ ರವರುಗಳು ಇದ್ದರು.
ಈ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿ ಮತ್ತು ಮಾಲು ಪತ್ತೆ ಮಾಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು ಪ್ರಶಂಶಿಸಿರುತ್ತಾರೆ.
Tags:
ತೀರ್ಥಹಳ್ಳಿ ಸುದ್ದಿ