ನಾಳೆ ರಾಮೇಶ್ವರ ಹಾಗೂ ಮಾಧವ ದೇವರ ಸನ್ನಿಧಿಯಲ್ಲಿ ಹರಿಹರೋತ್ಸವ - ಶೃಂಗೇರಿಯ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಸಾನಿಧ್ಯ Temple

ನಾಳೆ ರಾಮೇಶ್ವರ ಹಾಗೂ ಮಾಧವ ದೇವರ ಸನ್ನಿಧಿಯಲ್ಲಿ ಹರಿಹರೋತ್ಸವ - ಶೃಂಗೇರಿಯ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಸಾನಿಧ್ಯ 

ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಹಾಗೂ ಶ್ರೀ ಮಾಧವ ದೇವರ ಸನ್ನಿಧಿಯಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಪ್ರಯತ್ನ ಹರಿಹರೋತ್ಸವ ಕಾರ್ಯಕ್ರಮ ನಡೆಯಲಿದೆ.. ಈ ವಿಶೇಷ ಕಾರ್ಯಕ್ರಮದಲ್ಲಿ ಶೃಂಗೇರಿಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಸಾನ್ನಿಧ್ಯ ವಹಿಸಿ ಭಕ್ತರನ್ನು ಅನುಗ್ರಹಿಸಲಿದ್ದಾರೆ. 

ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿರುವ ಶ್ರೀ ರಾಮೇಶ್ವರ ಹಾಗೂ ಶ್ರೀ ಮಾಧವ ದೇವಸ್ಥಾನದಲ್ಲಿ ಸಹಸ್ರ ನಾರಿಕೇಳ ಗಣಯಾಗ ಮತ್ತು ಶಾರದಾರಾಧನಂ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಡೆಸುವುದಾಗಿ ಸಂಕಲ್ಪಿಸಿದ್ದು ಈ ಕಾರ್ಯಕ್ರಮಗಳಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ
ಮಹಾಸನ್ನಿಧಾನಂಗಳವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಮ್ಮ ಸಾನ್ನಿಧ್ಯ ವಹಿಸಿ ನಮ್ಮನ್ನು ಅನುಗ್ರಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತ ಮಹಾಜನರು ಭಾಗವಹಿಸಿ, ಶ್ರೀ ಜಗದೀಶ್ವರನ ಮತ್ತು ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಮಿತಿಯವರು ಕೋರಿದ್ದಾರೆ..


ಏನೆಲ್ಲಾ ಕಾರ್ಯಕ್ರಮ ಇರುತ್ತೆ?

ದಿನಾಂಕ 06-06-2026 ನೇ ಶನಿವಾರ ಸಂಜೆ 05-00 ಘಂಟೆಗೆ ಶ್ರೀ ಜಗದ್ಗುರುಗಳ ಆಗಮನ, ”ಪೂರ್ಣಕುಂಭ ಸ್ವಾಗತ” ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ "ಧಾರ್ಮಿಕ ಸಭೆ” ವಿದ್ಯಾರ್ಥಿಗಳಿಗೆ ಜಗದ್ಗುರುಗಳ ಕರಕಮಲಗಳಿಂದ ಅನುಗ್ರಹಪೂರ್ವಕ ಶಿಕ್ಷಣ ಸಾಮಗ್ರಿಗಳ ಪ್ರದಾನ "ಶಾರದಾರಾಧನಂ” ಎಂಬ ವಿಶಿಷ್ಟ ಕಾರ್ಯಕ್ರಮ. ಅನುಗ್ರಹ ಭಾಷಣ ಹಾಗೂ ರಾತ್ರಿ ಗಾಯತ್ರಿ ಮಂದಿರದಲ್ಲಿ ಶ್ರೀ ಜಗದ್ಗುರುಗಳಿಂದ "ಶ್ರೀ ಚಂದ್ರಮೌಳೀಶ್ವರ ಪೂಜೆ” ನಡೆಯಲಿದೆ.

ದಿನಾಂಕ 07-06-2026 ನೇ ಭಾನುವಾರ ಬೆಳಗ್ಗೆ 07-00 ಘಂಟೆಗೆ ತೀರ್ಥಹಳ್ಳಿ-ರಥಬೀದಿಯಲ್ಲಿ ರಾಮೇಶ್ವರ ಹಾಗೂ ಶ್ರೀ ಮಾಧವ ದೇವಸ್ಥಾನದ ಆವರಣದಲ್ಲಿ ”ಸಹಸ್ರ ನಾರಿಕೇಳ ಗಣಯಾಗ” ಬೆಳಗ್ಗೆ 11-00 ಘಂಟೆಗೆ ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ"ಪೂರ್ಣಾಹುತಿ” ಮಧ್ಯಾಹ್ನ 12-00 ಘಂಟೆಗೆ ಶ್ರೀ ರಾಮೇಶ್ವರ ದೇವರಿಗೆ ಶ್ರೀ ಜಗದ್ಗುರುಗಳಿಂದ ”ಮಹಾಪೂಜೆ”
ನಂತರ "ಅನ್ನಸಂತರ್ಪಣೆ” ಸಂಜೆ 05-00 ಘಂಟೆಗೆ ಶ್ರೀ ಜಗದ್ಗುರುಗಳ ಸಮ್ಮುಖದಲ್ಲಿ "ಗಿರಿಜಾ ಕಲ್ಯಾಣ”
ಮಾತೆಯರಿಂದ "ಸ್ತೋತ್ರ ತ್ರಿವೇಣಿ ಪಠಣ” ಕಾರ್ಯಕ್ರಮಗಳು ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಶ್ರೀರಾಮೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಮೇಶ್ವರ ಹಾಗೂ ಶ್ರೀ ಮಾಧವ ದೇವರ ಅನುಗ್ರಹಕ್ಕೆ ಪಾತ್ರರಾಗಲು ಹರಿಹರೋತ್ಸವ ಸಮಿತಿಯವರು ಕೋರಿದ್ದಾರೆ..





Previous Post Next Post