ಜಯಕರ್ನಾಟಕ ಸಂಘಟನೆಯಿಂದ ಶವಾಗಾರ ಪೆಟ್ಟಿಗೆ ಹಸ್ತಾಂತರ Jc Hospaital

ಜಯಕರ್ನಾಟಕ ಸಂಘಟನೆಯಿಂದ ಶವಾಗಾರ ಪೆಟ್ಟಿಗೆ ಹಸ್ತಾಂತರ 

ತೀರ್ಥಹಳ್ಳಿ : ಪಟ್ಟಣದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ತೀರ್ಥಹಳ್ಳಿಯ ಜಯ ಕರ್ನಾಟಕ ಸಂಘಟನೆ ವತಿಯಿಂದ ಶವಾಗಾರ ಪೆಟ್ಟಿಗೆ ಹಸ್ತಾಂತರ ಮಾಡಲಾಯಿತು..

ಸಂಘದ ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್  ಮಾತನಾಡಿ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರ ಪೆಟ್ಟಿಗೆ ಇರಲಿಲ್ಲ..  ಜಯ ಕರ್ನಾಟಕ ಸಂಘಟನೆ ವತಿಯಿಂದ ತೀರ್ಥಹಳ್ಳಿ ಉತ್ಸವ ಎಂಬ ಕಾರ್ಯಕ್ರಮ ಮಾಡಿದ್ದೆವು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು.ಆ ಕಾರ್ಯಕ್ರಮದಲ್ಲಿ ಉಳಿದಂತ ಹಣದಲ್ಲಿ ಶವಾಗಾರ ಪೆಟ್ಟಿಗೆಯನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಿದ್ದೇವೆ.. 

ಯಾವುದೇ ಜಾತಿ ಬೇಧವಿಲ್ಲದೆ ಈ ಶವಪೆಟ್ಟಿಗೆ ಉಪಯೋಗಿಸಿಕೊಳ್ಳಬಹುದು.. ಪಟ್ಟಣ ಪಂಚಾಯತ್ ವತಿಯಿಂದ ಈಗ ಒಂದು ಶವಾಗಾರ ಪೆಟ್ಟಿಗೆ ಕೊಡಲಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿವೆ. 
ಆದ್ದರಿಂದ ಇನ್ನೊಂದು ಶವಾಗಾರ ಪೆಟ್ಟಿಗೆ ನೀಡುತ್ತಿದ್ದೇವೆ. ಯಾವುದೇ ರಾಜಕೀಯ ಇಲ್ಲದೆ ಸಂಘಟನೆ ಮೂಲಕ ಇದನ್ನು ನೀಡುತ್ತಿದ್ದೇವೆ. ಇದನ್ನು ಯಾರು ಬೇಕಾದರೂ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಅಮರ್ ನಾಥ್ ಶೆಟ್ಟಿ, ಶ್ರೀಕಾಂತ್ ಬೆಟ್ಟಮಕ್ಕಿ, ತಾರಾನಾಥ್ ಶೆಟ್ಟಿ, ಅಂಜನ್, ಕಾರ್ತಿಕ್, ರಾಜೇಶ್, ಸುಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು..



Previous Post Next Post