ತೀರ್ಥಹಳ್ಳಿಯ ಸಾಧಕ ವಿದ್ಯಾರ್ಥಿಗಳಿಗೆ ಗಾಯತ್ರಿ ಜುವೆಲ್ಲರ್ಸ್ ವತಿಯಿಂದ ಗೌರವ ಸನ್ಮಾನ Gayatri Jewellery

ತೀರ್ಥಹಳ್ಳಿಯ ಸಾಧಕ ವಿದ್ಯಾರ್ಥಿಗಳಿಗೆ ಗಾಯತ್ರಿ ಜುವೆಲ್ಲರ್ಸ್ ವತಿಯಿಂದ ಗೌರವ ಸನ್ಮಾನ 

ತೀರ್ಥಹಳ್ಳಿ : ಮಲೆನಾಡಿನ ಪ್ರತಿಷ್ಠಿತ ಚಿನ್ನದ ಮಳಿಗೆಯಾಗಿರುವ ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ ವತಿಯಿಂದ ರಾಜ್ಯಕ್ಕೆ ಹಾಗೂ ತಾಲೂಕಿಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಪ್ರಮುಖ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಪಟ್ಟಣದ ಗಾಂಧಿ ಚೌಕದಲ್ಲಿರುವ ಗಾಯತ್ರಿ ಜ್ಯುವೆಲ್ಲರಿಯಲ್ಲಿ ಪಿಯುಸಿಯ ಸಂಜಯ್, ಪ್ರತೀಕ್, ಮಂದಾರ, ಅನಿರುದ್,  ಅವನಿ ಹಾಗೂ ಎಸ್ ಎಸ್ ಎಲ್ ಸಿಯ ಅನಘ, ದೇವಿಪ್ರಸಾದ್,ಸಾಯಿ ಶ್ರೇಷ್ಠ, ಶ್ರೀ ಶ್ರದ್ದಾ, ಶೃಂಗ, ಆರಾಧ್ಯ, ಆತ್ಮಿಕಾ, ಅಭಿಜ್ಞಾ ಕಶ್ಯಪ್,ರಿಫಾತ್ ಸುಲ್ತಾನ್, ಸಾತ್ವಿಕ್ ಈ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು..

ಇನ್ನು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳನ್ನು ಗಾಯತ್ರಿ ಜ್ಯುವೆಲ್ಲರ್ಸ್ ತಂಡ ಮಾಡಿದೆ. ಗಾಯತ್ರಿ ಜ್ಯುವೆಲ್ಲರ್ಸ್‌ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ಹಾಗೂ ಮೋಹಿನಿ ಆಚಾರ್ಯ, ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.

ಮಲೆನಾಡಿನಲ್ಲೇ ಉತ್ತಮ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಹೆಸರುವಾಸಿ ಆಗಿರುವ ಗಾಯತ್ರಿ ಜ್ಯುವೆಲ್ಲರ್ಸ್ ತಮ್ಮ ಉದ್ಯಮದ ಜೊತೆಗೆ  ಸಾಮಾಜಿಕ ಕಾಳಜಿ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. 



Previous Post Next Post